ನವದೆಹಲಿ: ಇನ್ಮೇಲೆ ಕಾನೂನು ನೋಟೀಸ್ ಗಳು , ಸಮನ್ಸ್ ಗಳು ವಾಟ್ಸ್ ಆಪ್ ಮುಖಾಂತರ ಕೈಸೇರಲಿದೆ. ಈ ರೀತಿಯ ನೂತನ ವ್ಯವಸ್ಥೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಹೌದು, ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿನ ಎಲ್ಲಾ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಿದ್ದು, ಹಲವಾರು ಬದಲಾವಣೆಗಳು ನಡೆಯುತ್ತಿವೆ. ಅದರಂತೆ ಈಗ ಕೋರ್ಟ್ ಕೂಡ ಸಮನ್ಸ್ ಗಳನ್ನು ತಲುಪಿಸಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ವಾಟ್ಸ್ ಆಪ್ ಮಾತ್ರವಲ್ಲ ಇಮೇಲ್, ಫ್ಯಾಕ್ಸ್ ಮೂಲಕವೂ ಕಾನೂನು ನೋಟೀಸ್ ಮತ್ತು ಸಮನ್ಸ್ ಜಾರಿ ಮಾಡಲಾಗುವುದು. ಈ ಮೂಲಕ ಕಾನೂನು ವ್ಯವಸ್ಥೆಗೂ ಡಿಜಿಟಲ್ ಸ್ಪರ್ಷ ಸಿಕ್ಕಂತಾಗಿದೆ. ಇದಕ್ಕೂ ಮೊದಲು ಕೊರೊನಾ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಸುಪ್ರೀಂ ಅನುಮತಿ ನೀಡಿತ್ತು.
ಶುಕ್ರವಾರದಂದು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಸಿಜೆಐ ನ್ಯಾ| ಎಸ್. ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ‘ಪ್ರಸ್ತುತ ಸಮನ್ಸ್ ನೋಟೀಸ್ ಜಾರಿಗಾಗಿ ಅಂಚೆ ಕಚೇರಿಗೆ ತೆರಳುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇವೆ. ಇನ್ನು ಮುಂದೆ ವಾಟ್ಸ್ ಆಪ್, ಇಮೇಲ್. ಫ್ಯಾಕ್ಸ್ ಮತ್ತು ಇತರ ಫೋನ್ ಮೆಸೆಂಜರ್ ಸೇವೆಗಳ ಮೂಲಕ ನಡೆಸಲು ಸಮ್ಮತಿಸುತ್ತಿದ್ದೇವೆ’ಎಂದಿದೆ.
ವಾಟ್ಸ್ ಆಪ್ ನಲ್ಲಿ ಸಮನ್ಸ್, ನೋಟೀಸ್ ಕಳುಹಿಸಿದಾಗ ಎರಡು ನೀಲಿ ಟಿಕ್ ಮಾರ್ಕ್ ಬಂದರೆ ಸ್ವೀಕೃತಿದಾರರು ನೋಟೀಸ್ ವೀಕ್ಷಿಸಿದ್ದಾರೆ ಎಂಬುದಾಗಿ ಅರ್ಥೈಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಇನ್ಮೇಲೆ ವಾಟ್ಸ್ ಆಪ್ , ಇ-ಮೇಲ್ ಮೂಲಕವೂ ಸಮನ್ಸ್, ನೋಟೀಸ್ ಜಾರಿ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು