ವಾಣಿಜ್ಯ ಜಾಹಿರಾತು

ಸಾಮಾನ್ಯವಾಗಿ ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಅಥವಾ ಉಪ್ಪು-ಖಾರವನ್ನು ಹಚ್ಚಿ ತಿನ್ನುತ್ತೇವೆ. ಸೌತೆಕಾಯಿ ಆಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹು ಪ್ರಯೋಜನಕಾರಿ. ನಿಯಮಿತವಾಗಿ ಸೌತೆಕಾಯಿಯನ್ನು ಕೂದಲ ಸೌಂದರ್ಯಕ್ಕಾಗಿ ಬಳಸುವುದರಿಂದ ಸದೃಢ ಮತ್ತು ನಯವಾದ ಕೂದಲನ್ನು ಹೊಂದಲು ಸಹಾಯ ಮಾಡುತ್ತದೆ. ಮುಳ್ಳುಸೌತೆ ಸಿಲಿಕಾನ್ ಮತ್ತು ಸಲ್ಫರ್ ಕೂದಲು ಉದುರುವಿಕೆಯನ್ನು ನಿಲ್ಲಿಸಿ ಆರೋಗ್ಯಕರ ಕೂದಲು ಹೊಂದಲು ಸಹಕಾರಿಯಾಗಿದೆ.

ಕೂದಲಿಗೆ ಸೌತೆಕಾಯಿ ಬಳಕೆ:

ಸೌತೆಕಾಯಿ ಹೇರ್ ಪ್ಯಾಕ್ 
ಸೌತೆಕಾಯಿ ರಸವನ್ನು ಮೊಟ್ಟೆ ಮತ್ತು ಅಲೋವೆರಾದ ಮಿಶ್ರಣದೊಂದಿಗೆ ಸೇರಿಸಿ ಹೇರ್ ಪ್ಯಾಕ್ ನ್ನು ಸಿದ್ಧಪಡಿಸಬೇಕು. ನಂತರ ಅದನ್ನು ಕೂದಲಿಗೆ ಮಾತ್ರ ಹಚ್ಚಬೇಕು. ಚೆನ್ನಾಗಿ ಕೂದಲಿಗೆ ಮಸಾಜ್ ನೀಡಿದ ಬಳಿಕ ಸುಮಾರು ಒಂದು ಗಂಟೆಯ ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಬೇಕು.

ಸೌತೆಕಾಯಿ ಎಣ್ಣೆ
ಒಣಗಿದ ಸೌತೆಕಾಯಿ ಬೀಜಗಳನ್ನು ತೆಂಗಿನ ಎಣ್ಣೆಯೊಂದಿಗೆ ಕುದಿಸಬೇಕು. ಬಳಿಕ ಎಣ್ಣೆಯಿಂದ ಬೀಜಗಳನ್ನು ಬೇರ್ಪಡಿಸಿದರೆ ಸೌತೆಕಾಯಿ ಎಣ್ಣೆ ಸಿದ್ಧವಾಗುತ್ತದೆ. ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. ನಂತರ ತಣ್ಣಗಿನ ನೀರಿನಿಂದ ಕೂದನ್ನು ತೊಳೆಯಬೇಕು. ವಾರದಲ್ಲಿ ಎರಡು ಬಾರಿ ಇದನ್ನು ಮಾಡುವುದರಿಂದ ಕೂದಲು ಉದುರುವುದನ್ನು ಕಡಿಮೆಗೊಳಿಸುತ್ತದೆ.

ಸೌತೆಕಾಯಿ ಶಾಂಪೂ
ಸೌತೆಕಾಯಿ ಮತ್ತು ನಿಂಬೆಯ ರಸವನ್ನು ತೆಗೆದು ಬ್ಲೆಂಡರ್ ಸಹಾಯದಿಂದ ಅದನ್ನು ಪೇಸ್ಟ್ ರೂಪಕ್ಕೆ ತರಬೇಕು. ಅದನ್ನು ಒಂದು ಬಾಟಲಿಯಲ್ಲಿ ಹಾಕಿಡಬೇಕು. ಈ ಪೇಸ್ಟ್ ರೂಪದ ಶಾಂಪೂವನ್ನು ತಲೆಯ ನೆತ್ತಿಗೆ ಹಚ್ಚಬೇಕು. ಚೆನ್ನಾಗಿ ಮಸಾಜ್ ಮಾಡಿದ ಬಳಿಕ ತಣ್ಣಗಿನ ನೀರಿನಿಂದ ಕೂದಲನ್ನು ತೊಳೆಯಬೇಕು. ಇದರಿಂದ ಕೂದಲಿನ ಶುಷ್ಕತೆ ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.