ಕ್ಯಾರೆಟ್‌ನಿಂದ ತಯಾರಿಸಲಾಗುವ ಈ ಪಾಯಸವು ಅತ್ಯಂತ ರುಚಿಕರವಾದ ಪಾಕವಿಧಾನ. ಇದನ್ನು ಒಮ್ಮೆ ಸವಿದರೆ ಮನಸ್ಸು ಮತ್ತು ನಾಲಿಗೆ ಮತ್ತೆ ಮತ್ತೆ ತಿನ್ನಲು ಬಯಸುವುದು. ಸಿಹಿ ತಿಂಡಿಯಾಗಿರುವ ಕ್ಯಾರೆಟ್ ಪಾಯಸವು ಅತ್ಯುತ್ತಮ ಪೌಷ್ಠಿಕಾಂಶಗಳಿಂದ ಕೂಡಿರುತ್ತದೆ. ದಪ್ಪ ಸ್ಥಿರತೆಯೊಂದಿಗೆ ಇರುವ ಈ ಪಾಯಸವನ್ನು ಭಾರತದಾದ್ಯಂತ ತಯಾರಿಸುವರು. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಪಾಯಸವು ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿರುತ್ತದೆ.
ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಪೋಷಣೆ ನೀಡುವುದು. ಈ ಸಿಹಿ ತಿಂಡಿಯನ್ನು ಹಬ್ಬ ಹರಿದಿನಗಳಲ್ಲಿ, ವಿಶೇಷ ಶುಭ ಕಾರ್ಯಗಳಲ್ಲಿ ಹಾಗೂ ಬಂಧು ಮಿತ್ರರು ಆಗಮಿಸಿದಾಗ ತಯಾರಿಸಲಾಗುತ್ತದೆ. ಬಹಳ ಸುಲಭ ಹಾಗೂ ಸರಳ ವಿಧಾನಗಳನ್ನು ಒಳಗೊಂಡಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ಪ್ರಯತ್ನಿಸಬಹುದು.
ಬೇಕಾಗುವ ಸಾಮಾಗ್ರಿಗಳು
1 ಕಪ್ ತುರಿದ ಕ್ಯಾರೆಟ್
1 ಲೀಟರ್ ಅಗತ್ಯಕ್ಕೆ ತಕ್ಕಷ್ಟು ಹಾಲು
1 ಕಪ್ ಅಗತ್ಯಕ್ಕೆ ತಕ್ಕಷ್ಟು ತುಪ್ಪ
ಅಗತ್ಯಕ್ಕೆ ತಕ್ಕಷ್ಟು ಗೋಡಂಬಿ
ಅಗತ್ಯಕ್ಕೆ ತಕ್ಕಷ್ಟು ಒಣ ದ್ರಾಕ್ಷಿ
1 ಚಿಟಿಕೆಯಷ್ಟು ಪುಡಿ ಮಾಡಿದ ಹಸಿರು ಏಲಕ್ಕಿ
4 ಚಮಚ ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ
ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಡಂಬಿ, ಒಣ ದ್ರಾಕ್ಷಿಯನ್ನು ಸೆರಿಸಿ, 2-3 ನಿಮಿಷಗಳ ಕಾಲ ಹುರಿಯಿರಿ. ಡ್ರೈ ಫ್ರೂಟ್ಸ್ ಹೊಂಬಣ್ಣವನ್ನು ಪಡೆದುಕೊಂಡ ಬಳಿಕ ಒಂದು ಬೌಲ್‌ಗೆ ವರ್ಗಾಯಿಸಿ.
ಅದೇ ಬಾಣಲೆಯಲ್ಲಿ ತುರಿದುಕೊಂಡ ಕ್ಯಾರೆಟ್ ಹಾಕಿ, 2-3 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಹಾಲನ್ನು ಸೇರಿಸಿ, 8-10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
ಕ್ಯಾರೆಟ್ ಚೆನ್ನಾಗಿ ಬೆಂದು, ದಪ್ಪ ಸ್ಥಿರತೆಯನ್ನು ಪಡೆದ ಬಳಿಕ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವ ತನಕ ನಿರಂತರವಾಗಿ ಪಾಯಸವನ್ನು ಕೈಯಾಡಿಸುತ್ತಲೇ ಇರಿ.
ಹುರಿದುಕೊಂಡ ಗೋಡಂಬಿ, ಒಣ ಹಣ್ಣುಗಳು ಮತ್ತು ಏಲಕ್ಕಿಯನ್ನು ಸೆರಿಸಿ, ಚೆನ್ನಾಗಿ ಕುದಿಸಿ. ಮಿಶ್ರಣವು ಚೆನ್ನಾಗಿ ಬೆಂದ ಬಳಿಕ ಉರಿಯನ್ನು ಆರಿಸಿ. ಈ ಸಿಹಿಯಾದ ಪಾಯಸವನ್ನು ಬಿಸಿಯಿರುವಾಗ ಅಥವಾ ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿಕೊಂಡು ಸವಿಯಬಹುದು.