ವಾಣಿಜ್ಯ ಜಾಹಿರಾತು

ಮಂಗಳೂರು: ವಿಕಲಚೇತನರ ಕುಂದುಕೊರತೆಗಳ ಬಗ್ಗೆ ಗ್ರಾಮ ಪಂಚಾಯತ್‍ನ ಎಮ್.ಆರ್.ಡಬ್ಲೂ, ಹಾಗೂ ವಿ.ಆರ್.ಡಬ್ಲೂ ಅವರಲ್ಲಿ ಮಾಹಿತಿ ನೀಡುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರತಿ ತಿಂಗಳ ಮೂರನೇ ಸೋಮವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿಯ ಸಭೆಯಲ್ಲಿ ಅವುಗಳ ಬಗ್ಗೆ ಚರ್ಚಿಸಿ, ಪರಿಹಾರ ಕಲ್ಪಿಸಲಾಗುವುದು ಹಾಗೂ ದೂರುದಾರರು ವೀಡಿಯೋ ಕಾಲ್ ಮೂಲಕ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ವಿಕಲಚೇತನರ ಪಿಂಚಣಿ ಹಾಗೂ ಇತರ ಎಲ್ಲಾ ಸವಲತ್ತುಗಳಿಗಾಗಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ ಕಾರ್ಡ್) ಕಡ್ಡಾಯವಾಗಿರುವ ಕಾರಣ ಹಿಂದಿನ ವಿಕಲಚೇತನರ ಗುರುತಿನ ಚೀಟಿ ಹೊಂದಿದ ಅಥವಾ ಹೊಸದಾಗಿ ಅರ್ಜಿ ಹಾಕುವವರು ತಮ್ಮ ಪಂಚಾಯತ್ ವ್ಯಾಪ್ತಿಯ ಎಮ್.ಆರ್.ಡಬ್ಲೂ, ಯು.ಆರ್.ಡಬ್ಲೂ ಹಾಗೂ ವಿ.ಆರ್.ಡಬ್ಲೂಗಳನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.