ವಾಣಿಜ್ಯ ಜಾಹಿರಾತು
ಮೂಡುಬಿದಿರೆ: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅವರ ಕಾರು ಅಪಘಾತಕ್ಕೀಡಾಗಿದ ಘಟನೆ ಮಿಜಾರು ಸಮೀಪ ನಡೆದಿದೆ. ಘಟನೆಯಲ್ಲಿ ಸುದರ್ಶನ್ ಅವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರು ಕೆಸರಿನಲ್ಲಿ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಪರಿಣಾಮ ಕಾರು ಜಖಂಗೊಂಡಿದೆ. ಮಿಜಾರು ಸಮೀಪ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸುದರ್ಶನ್ ರ ಇನ್ನೋವಾ ಕಾರು ಗುದ್ದುವುದನ್ನು ತಪ್ಪಿಸಿದಾಗ , ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಸಂಪೂರ್ಣ ಜಖಂಗೊಂಡಿದೆ.
ವಾಣಿಜ್ಯ ಜಾಹಿರಾತು