ವಾಣಿಜ್ಯ ಜಾಹಿರಾತು

ಮುಂಬಯಿ: ಭಾರತದ ಹೆಸರಾಂತ ಉದ್ಯಮಿ, ಸರಳತೆಯ ಸಾಕಾರರೂಪ ರತನ್ ಟಾಟಾ ಅವರಿಗೆ ಶ್ವಾನಗಳೆಂದರೆ ಬಲುಪ್ರೀತಿ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಫಾಲೋ ಮಾಡುತ್ತಿರುವವರಿಗೆ ಇದು ಗೊತ್ತಿದೆ.  ಬೀದಿನಾಯಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಾರೆ. ಟಾಟಾ ಗ್ರೂಪ್‌ನ ಜಾಗತಿಕ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಸ್ಥಾಪಿಸಲಾದ ಕೆನಲ್‌ನಲ್ಲಿ ವಾಸಿಸುವ ಅನೇಕ  ಬೀದಿನಾಯಿಗಳ ಪೈಕಿ ರತನ್ ಟಾಟಾ ಅವರಿಗೆ ಬಲುಪ್ರೀತಿ ಇರುವ ಶ್ವಾನವೇ ‘ ಗೋವಾ’ . ವಿಶೇಷ ಅಂದರೆ ಈ ಶ್ವಾನ ಟಾಟಾ ಅವರ ಆಫೀಸ್ ಒಡನಾಡಿಯೂ ಹೌದು!  ಕಪ್ಪು ಮತ್ತು ಬಿಳಿ ಬಣ್ಣದ ಈ ನಾಯಿ ರತನ್ ಟಾಟಾ ಅವರ ಕಚೇರಿಯಲ್ಲಿಯೇ ಅದರಲ್ಲೂ ರತನ್ ಟಾಟಾ ಅವರ ಪಕ್ಕದಲ್ಲಿಯೇ  ಇಡೀ ದಿನ ಕುಳಿತುಕೊಳ್ಳುತ್ತದೆಯಂತೆ ಅಷ್ಟೇ ಅಲ್ಲ ಮೀಟಿಂಗ್ ಗಳಿಗೂ ಇವನನ್ನು ಕರೆದೊಯ್ಯುತ್ತಾರಂತೆ ಟಾಟಾ!

‘ಹ್ಯೂಮನ್ಸ್ ಆಫ್ ಬಾಂಬೆ’ ಸಂಸ್ಥಾಪಕಿ ಕರಿಷ್ಮಾ ಮೆಹ್ತಾ ಎಂಬವರು, ರತನ್ ಟಾಟಾ ಅವರೊಂದಿಗೆ ತಮ್ಮ ಮೊದಲ ಸಂವಾದದ ಬಗ್ಗೆ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಬರೆದುಕೊಂಡಿದ್ದು ಅದರಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.ಈ ಪೋಸ್ಟ್ ವೈರಲ್ ಆಗಿದ್ದು, ರತನ್ ಟಾಟಾ ಕಚೇರಿ ಒಡನಾಡಿಯ ಬಗ್ಗೆ ತಿಳಿದು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ಅವರು ಬರೆದಿರುವಂತೆ, ‘ ರತನ್ ಟಾಟಾ ಅವರನ್ನು ಮೊದಲು ಭೇಟಿಯಾದಾಗ ಅವರ ಕಚೇರಿಯಲ್ಲಿ ಅವರು ಕುಳಿತ ಪಕ್ಕದ ಕುರ್ಚಿಯಲ್ಲಿ ‘ ಗೋವಾ’ ಕುಳಿತಿತ್ತು. ಅದು ಟಾಟಾ ಅವರನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿತ್ತು’ ಎಂದಿದ್ದಾರೆ.

‘ ನಾನು ಟಾಟಾ ಅವರ ಕಚೇರಿಯ ಹೊರಭಾಗದಲ್ಲಿ ಕಾಯುತ್ತಿದ್ದೆ. ಆಗ ಅವರ ಪಕ್ಕದ ಕುರ್ಚಿಯಲ್ಲಿ ನಾಯಿ ಕುಳಿತಿರುವುದು ಕಂಡಿತು. ನಾನು ನಾಯಿಯೆಂದರೆ ಭಯಪಡುತ್ತೇನೆ ಈ ಬಗ್ಗೆ ಟಾಟಾ ಅವರ ಅವರ ಸಹಾಯಕ ಶಾಂತನು ಅವರಿಗೆ ತಿಳಿಸಿದೆ. ಅವರು ಟಾಟಾ ರೊಂದಿಗೆ ಮಾತು ವಿನಿಮಯ ಮಾಡಿಕೊಂಡರು. ಆಗ ಟಾಟಾ, ನಾಯಿಯತ್ತ ತಿರುಗಿದರು. ಅವರ ಮುಖದಲ್ಲಿ ಸಣ್ಣ ನಗು ಕಂಡಿತು. ಅವರು ಅವನ ಬಳಿ ಮಾತನಾಡಿ ‘ ಗೋವಾ, ಅವರು ನಿನಗೆ ಹೆದರುತ್ತಾರೆ, ದಯವಿಟ್ಟು ಒಳ್ಳೆಯ ಹುಡುಗನಾಗಿ ಕುಳಿತುಕೊ! ‘ಎಂದರು ಎಂದು ಮೆಹ್ತಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅದು ಟಾಟಾ ಅವರ ಮಾತನ್ನು ಅರ್ಥಮಾಡಿಕೊಂಡಂತೆ ಕಾಣಿಸಿತು. ಅಲ್ಲಿಂದ ಇಡೀ 30-40 ನಿಮಿಷಗಳ ಕಾಲ ನಾನು ಅಲ್ಲಿದ್ದೆ. ಗೋವಾ ನನ್ನ ಹತ್ತಿರ ಎಲ್ಲೂ ಬರಲಿಲ್ಲ! ನಾನು ದಿಗ್ಭ್ರಮೆಗೊಂಡಿದ್ದೆ ಇದು ಹಿಂದೆಂದೂ ಸಂಭವಿಸಿರಲಿಲ್ಲ!” ಕರಿಷ್ಮಾ ಮೆಹ್ತಾ ಬರೆದಿದ್ದಾರೆ.

ಈ ಮೊದಲೊಮ್ಮೆ ರತನ್ ಟಾಟಾ ಅವರು ತಮ್ಮ ಇನ್ ಸ್ಟಾಂ ಗ್ರಾಮ್ ಪೇಜ್ ನಲ್ಲಿ ಗೋವಾ ಫೋಟೋ ಶೇರ್ ಮಾಡಿಕೊಂಡಿದ್ದರು. ನನ್ನ ಆಫೀಸ್ ಒಡನಾಡಿ ಎಂದೂ ಬರೆದುಕೊಂಡಿದ್ದರು.

`ಗೋವಾ ಬೀದಿನಾಯಿ, ಅದು ನಮ್ಮನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿತು! ಆದ್ದರಿಂದ ನಾವು ಅವನನ್ನು ಮರಳಿ ದತ್ತು ತೆಗೆದುಕೊಂಡೆವು!’ ಎಂದು ರತನ್ ಟಾಟಾ ತಮ್ಮ ಬಳಿ ಹೇಳಿರುವುದಾಗಿಯೂ ಮೆಹ್ತಾ ಪೋಸ್ಟ್ ನಲ್ಲಿ ಬರೆದಿದ್ದಾರೆ. ಗೋವಾ ಇಡೀ ದಿನ ಆಪೀಸ್ ನಲ್ಲಿ ಕಳೆಯುತ್ತದೆ ಮತ್ತು ಟಾಟಾ ಅವರು ಆತನನ್ನು ಮೀಟಿಂಗ್ ಗಳಿಗೂ ಕರೆದೊಯ್ಯುತ್ತಾರೆ ಎಂದು ಮೆಹ್ತಾ ಬರೆದಿದ್ದಾರೆ.
ಇದರ ಹೊರತಾಗಿ ರತನ್ ಟಾಟಾ ಅವರೊಂದಿಗೆ ನಡೆದ ಸಂವಾದ ಕುರಿತಾಗಿಯೂ ಮೆಹ್ತಾ ಹಂಚಿಕೊಂಡಿದ್ದಾರೆ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.