ವಾಣಿಜ್ಯ ಜಾಹಿರಾತು
ಪಣಜಿ: ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಸ್ಥಗಿತಗೊಂಡಿದ್ದ ಒಂದೊಂದೇ ಚಟುವಟಿಕೆಗಳು ಆರಂಭವಾಗತೊಡಗಿವೆ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಲಾಕ್ ಡೌನ್ ಸಡಿಲಿಕೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾದ ಗೋವಾದಲ್ಲಿ ಜುಲೈ ೨ರಿಂದ ( ಇಂದಿನಿಂದ) ಪ್ರವಾಸಿಗರಿಗಾಗಿ ತೆರೆಯಲು ಗೋವಾ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರಕಟಿಸಿದ ಗೋವಾದ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ ಗಾಂವ್ಕರ್, ಜುಲೈ ೨ರಿಂದ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಲಿದೆ ಎಂದಿದ್ದಾರೆ. ಅದಕ್ಕಾಗಿ ೨೫೦ ಹೋಟಲುಗಳಿಗೆ ಅನುಮತಿ ನೀಡಲಾಗಿದೆ. ಕೆಲವು ನಿಯಮಗಳೊಂದಿಗೆ ಜುಲೈ ೨ರಿಂದ ದೇಶೀಯ ಪ್ರಯಾಣಿಕರು ಗೋವಾ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆದ ಪ್ರವಾಸಿಗರು ,ಕಡ್ಡಾಯವಾಗಿ ಹೋಟೆಲುಗಳಲ್ಲಿ ತಮ್ಮ ವಾಸ್ತವ್ಯವನ್ನು ಮುಂಗಡವಾಗಿ ಕಾಯ್ದಿರಿಸಬೇಕು.ಅಲ್ಲದೇ ಪ್ರವಾಸಿಗರು ರಾಜ್ಯ ಪ್ರವೇಶಿಸಬೇಕಾದರೆ ಕೋವಿಡ್- ೧೯ ನೆಗೆಟಿವ್ ರಿಪೋರ್ಟ್ ಹೊಂದಿರುವ ಪ್ರಮಾಣ ಪತ್ರ ತರಬೇಕು. ಅಥವಾ ಗಡಿಭಾಗದಲ್ಲಿ ತಪಾಸಣೆಗೆ ಒಳಪಟ್ಟು ರಿಪೋರ್ಟ್ ಬರುವವರೆಗೆ ಕ್ವಾರಂಟೈನ್ ನಲ್ಲಿರಬೇಕು ಎಂದಿದ್ದಾರೆ.ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಅವರ ರಾಜ್ಯಕ್ಕೆ ತೆರಳಲು ಅವಕಾಶವೂ ಇದೆ. ಬಯಸಿದ್ದಲ್ಲಿ ಇಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುವುದಾಗಿ ಸಚಿವರು ತಿಳಿಸಿದ್ದಾರೆ.
ವಾಣಿಜ್ಯ ಜಾಹಿರಾತು