ವಾಣಿಜ್ಯ ಜಾಹಿರಾತು

ಮಂಗಳೂರು: ಯಕ್ಷಗಾನದಲ್ಲಿ ಧಿಗಿಣ ತೆಗೆಯುವಾಗ ರಂಗಸ್ಥಳದಲ್ಲೇ ಕುಸಿದ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರ ಕಾಲಿಗೆ ಗಂಭೀರ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಇವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಜಯಾನಂದ ಸಂಪಾಜೆಯವರು ಬಪ್ಪನಾಡು ಮೇಳದಲ್ಲಿ ಕಲಾವಿದರಾಗಿದ್ದು, ಫೆ.17ರಂದು ನಾರಾವಿಯಲ್ಲಿ ಬಪ್ಪನಾಡು ಮೇಳದವರಿಂದ “ನಾಗತಂಬಿಲ” ತುಳು ಯಕ್ಷಗಾನ ಪ್ರದರ್ಶನದಲ್ಲಿ ಧಿಗಿಣ ತೆಗೆಯುವಾಗ ರಂಗಸ್ಥಳದಲ್ಲೇ ಕುಸಿದು ಬಿದ್ದರು. ಇದರಿಂದ ಕಾಲಿಗೆ ಗಾಯವಾಗಿತ್ತು. ತೀವ್ರವಾದ ಕಾಲು ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದಾಗ ಕಾಲ್ಮುರಿತಕ್ಕೆ ಒಳಗಾಗಿರುವುದಾಗಿ ವೈದ್ಯರು ತಿಳಿಸಿದರು. ಅಲ್ಲದೇ ಕಾಲಿಗೆ ಸರ್ಜರಿಗೆ ಮಾಡಬೇಕಾಗಿದ್ದು, ಆರು ತಿಂಗಳ ಕಾಲ ಬೆಡ್ ರೆಸ್ಟ್ ಬೇಕಾಗಿದೆ ಎಂದು ತಿಳಿಸಿದ್ದರು. ಯಕ್ಷಗಾನ ಪೋಷಕರಾದ ಡಾ. ಭಾಸ್ಕರಾನಂದ ಕುಮಾರರ ಸಹಕಾರದಿಂದ ಉಡುಪಿಯ HI TECH ಆಸ್ಪತ್ರೆಗೆ ದಾಖಲಾಗಿ ಮಾ.15ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಯಕ್ಷಗಾನವನ್ನೇ ನಂಬಿ, ಯಕ್ಷಗಾನವೇ ನನ್ನ ಜೀವನೋಪಾಯ ಎಂದು ನಂಬಿಕೊಂಡ ಜಯಾನಂದ ಸಂಪಾಜೆಯವರಿಗೆ ತನ್ನ ಆರೋಗ್ಯದ ಸ್ಥಿತಿ ಆಘಾತ ತಂದಿದೆ. ಕುಟುಂಬಕ್ಕೆ ಇವರೇ ಆಧಾರ ಸ್ಥಂಭವಾಗಿದ್ದು, ಮಕ್ಕಳಿಬ್ಬರೂ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇದರೊಂದಿಗೆ ಮನೆ ಕಟ್ಟಲು ಪಡೆದ ದೊಡ್ಡ ಮೊತ್ತದ ಸಾಲದ ಹೊರೆಯೂ ಇವರ ಮೇಲಿದೆ.
ಜೀವನ ನಡೆಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿರುವ ಜಯಾನಂದ ಸಂಪಾಜೆಯವರು ದಾನಿಗಳಲ್ಲಿ ಸಹಾಯಕ್ಕಾಗಿ ವಿನಂತಿಸಿದ್ದಾರೆ.

ಜಯಾನಂದ ಸಂಪಾಜೆಯವರಿಗೆ ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಬಹುದು.

ಬ್ಯಾಂಕ್ ಖಾತೆ ವಿವರ;

Jayananda S.T
Canara bank Sampaje
A/c no 0643101006611
IFSC code CNRB 0000643

Mobile number : 9731435243

Google account 9731435243
Phone pay : 9731435243

  • ಸಹಾಯ ಸಣ್ಣಮಟ್ಟದ್ದಾಗಿರಲೀ, ದೊಡ್ಡದಾಗಿರಲೀ, ಸಹಾಯ ಸಹಾಯವೇ. ಯಾವುದೇ ಫಲಾಪೇಕ್ಷೆ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ ಮತ್ತೊಬ್ಬರಿಗೆ ಸಹಾಯಮಾಡುವ ಅದೆಷ್ಟು ಮಾನವೀಯಮುಖಗಳು ನಮ್ಮ ನಡುವೆ ಇದ್ದಾರೆ ಎನ್ನುವುದೇ ಹೆಮ್ಮೆ. ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವುದು ಸಹೃದಯಿಗಳಿಂದಷ್ಟೇ ಸಾಧ್ಯ. ಅಂತಹ ಸಹೃದಯಿಗಳು ತಾವಾಗಿದ್ದರೇ ಅಥವಾ ನಿಮಗೆ ತಿಳಿದಿದ್ದರೇ ಅಂಥವರನ್ನು ಪರಿಚಯಿಸುವುದು ನಮ್ಮ ಹೆಮ್ಮೆ. ‘ಸಹಾಯಹಸ್ತ’ ಎನ್ನುವ ಶೀರ್ಷಿಕೆಯಡಿ ನಾವು, ನೆರವಾದವರು ಹಾಗೂ ನೆರವು ಯಾಚಿಸುವವರಿಗೆ ಸಂಬಂಧಿಸಿ ವರದಿ ಪ್ರಕಟಿಸುತ್ತೇವೆ. ಇದರಿಂದ ನಿಮ್ಮ ಕಾರ್ಯಕ್ಕೆ ಶ್ಲಾಘನೆ, ನೆರವು ನೀಡಲು ಪ್ರೇರಣೆ ಜೊತೆಗೆ ಅಗತ್ಯವುಳ್ಳವರಿಗೆ ನೆರವು ಸಿಗಬಹುದೆಂಬ ನಿರೀಕ್ಷೆ ನಮ್ಮದು. ಒಂದು ಮಾತು, ನೀವು ಸಹಾಯಮಾಡುತ್ತಿರುವ ಭಾವಚಿತ್ರವನ್ನು ನಾವಿಲ್ಲಿ ಪ್ರಕಟಿಸುವುದಿಲ್ಲ. ನಿಮ್ಮ/ಸಂಘಟನೆ ಹೆಸರು ಪ್ರಕಟಿಸುತ್ತೇವೆ. ನೀವು ಬಯಸಿದ್ದಲ್ಲಿ ನಿಮ್ಮ/ ಸಂಘಟನೆ ಸದಸ್ಯರ ಭಾವಚಿತ್ರ ಮಾತ್ರ ಪ್ರಕಟಿಸುತ್ತೇವೆ. ಇನ್ನು ಸಹಾಯದ ನಿರೀಕ್ಷೆಯಲ್ಲಿರುವವರು ನೀವಾಗಿದ್ದರೇ, ನಿಮ್ಮ ಅನುಮತಿ ಇದ್ದಲ್ಲಿ ಮಾತ್ರ ಭಾವಚಿತ್ರ ಪ್ರಕಟಿಸುತ್ತೇವೆ.
    ವಿವರಗಳನ್ನು ನಮ್ಮ ಸಂಖ್ಯೆ 6363376133 , 9019944921 ವಾಟ್ಸ್ಸ್ಯಾಪ್ ಮಾಡಿ. ಅಥವಾ [email protected] ಇ-ಮೈಲ್ ಮಾಡಿ.
ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.