ವಾಣಿಜ್ಯ ಜಾಹಿರಾತು

ಮಂಗಳೂರು : ಅಪರಾಧ ಹಿನ್ನೆಲೆ ಯುಳ್ಳ 11 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಗಡಿಪಾರು ಆದವರು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನಜೀರ್ ಕುಣಿಗಲ್(ಗೋಳ್ತಮಜಲು ಗ್ರಾಮ), ಇಬ್ರಾಹಿಂ ಖಲೀಲ್ (ವಳಚ್ಚಿಲ್ ಪದವು), ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಜಯರಾಜ್ ರೈ (ಬಡಗನ್ನೂರು), ಪುತ್ತೂರು ನಗರ ಠಾಣಾ ವ್ಯಾಪ್ತಿಯ ಇಬ್ರಾಹಿಂ (ಕಬಕ, ನೆಹರೂ ನಗರ), ಹಕೀಮ್ ಕೂನ್ರಡ್ಕ (ಕೆಮ್ಮಿಂಜೆ), ಬೆಳ್ಳಾರೆ ಠಾಣಾ ವ್ಯಾಪ್ತಿಯ ರೋಷನ್(ಕಡಬ, ಬರೆಪ್ಪಾಡಿ)ಪ್ರಸಾದ್ (ಸವಣೂರು) ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಅಬೂಬಕ್ಕರ್ ಸಿದ್ದಿಕ್(ನೆಕ್ಕಿಲಾಡಿ, ಪುತ್ತೂರು) ಉಬೈದ್ ಬಿ.ಎಸ್(ಉಪ್ಪಿನಂಗಡಿ) ತಸ್ಲೀಂ (ಬೋವು ಮಜಲು, ಬೆಳ್ತಂಗಡಿ) ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಿರಣ್ ಕುಮಾರ್ (ಶಿಶಿಲ) ಅವರನ್ನು ಸೆಪ್ಟೆಂಬರ್ 06 ರ ವರೆಗೆ ಗಡಿಪಾರು ಮಾಡಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ೧೧ ಮಂದಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.