ನವದೆಹಲಿ: ಭಾರತದ ನೆಟ್‍ಫ್ಲಿಕ್ಸ್ ಶೋ ‘ಡೆಲ್ಲಿ ಕ್ರೈಂ’ ಇಂಟರ್ ನ್ಯಾಷನಲ್ ಎಮ್ಮಿ ಅವಾರ್ಡ್- 2020 ಪಡೆದುಕೊಂಡಿದೆ. ಇದು ಟಿವಿ ಶೋಗಳಿಗೆ ನೀಡಲಾಗುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ.
‘ಡೆಲ್ಲಿ ಕ್ರೈಂ’ ಬೆಸ್ಟ್ ಡ್ರಾಮಾ ಸೀರೀಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ದೇಶವನ್ನೇ ತಲ್ಲಣಗೊಳಿಸಿದ್ದ 2012ರ ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣವನ್ನು ಆಧರಿಸಿದ ಕಥೆಯನ್ನು ‘ಡೆಲ್ಲಿ ಕ್ರೈಂ’ ಚಿತ್ರೀಕರಿಸಿತ್ತು. ಶೇಫಾಲಿ ಶಾ, ದೆಹಲಿ ಪೊಲೀಸ್ ಆಯುಕ್ತರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವ ರೋಚಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಚೀ ಮೆಹ್ತಾ ಈ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಪ್ರಶಸ್ತಿ ಒಲಿದಿರುವುದಕ್ಕೆ ಬಾಲಿವುಡ್‍ನ ಅನೇಕ ತಾರೆಯರು ಡೆಲ್ಲಿ ಕ್ರೈಂ ತಂಡಕ್ಕೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕಾಮಿಡಿ ಸೀರೀಸ್ ವಿಭಾಗದಲ್ಲಿ ಅಮೆಜಾನ್ ಪ್ರೈಂನ ಫಾರ್ ಮೋರ್ ಶಾಟ್ಸ್ ಪ್ಲೀಸ್ ಶೋ ಹಾಗೂ ಮೇಡ್ ಇನ್ ಹೆವೆನ್ ಸೀರೀಸ್‍ಗಾಗಿ ನಟ ಅರ್ಜುನ್ ಮಾಥುರ್ ಅತ್ಯುತ್ತಮ ನಟ ವಿಭಾಘದಲ್ಲಿ ನಾಮನಿರ್ದೇಶನಗೊಂಡಿದ್ದರು, ಆದರೆ ಎರಡೂ ವಿಭಾಗದಲ್ಲಿ ಪ್ರಶಸ್ತಿ ಕೈತಪ್ಪಿದೆ.
ಎಮ್ಮಿ ಅವಾರ್ಡ್ ಗಿಟ್ಟಿಸಿಕೊಂಡ ನಿರ್ಭಯಾ ಪ್ರಕರಣ ಆಧಾರಿತ ‘ಡೆಲ್ಲಿ ಕ್ರೈಂ’ ಸೀರೀಸ್
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು