ವಾಣಿಜ್ಯ ಜಾಹಿರಾತು

ಮಂಡ್ಯ : ‘ಕೆರೆ’ ಕಾಮೇಗೌಡ ಎಂದೇ ಖ್ಯಾತರಾಗಿದ್ದ ಕಲ್ಮನೆ ಕಾಮೇಗೌಡ (84)ಅವರು ವಯೋಸಹಜ ಅನಾರೋಗ್ಯದಿಂದ ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಿಧನರಾಗಿದ್ದಾರೆ.

ಮಂಡ್ಯದ ದಾಸನದೊಡ್ಡಿಯ ಕಾಮೇಗೌಡ ಅವರು ನೀರಿನ ಸಮಸ್ಯೆ ನೀಗಿಸಲು ತಮ್ಮ ಪ್ರದೇಶದಲ್ಲಿ 16 ಕೆರೆಗಳನ್ನು ತೋಡಿದ್ದರು. ಕಾಮೇಗೌಡರ ಕಾಯಕ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಕಾಮೇಗೌಡರನ್ನು ಶ್ಲಾಘಿಸಿದ್ದರು.

ಪ್ರಧಾನಿ ಮೋದಿ ಅವರು ಕಾಮೇಗೌಡರ ಕಥೆಯನ್ನು ಮತ್ತು ಅವರ ಹಳ್ಳಿಯಲ್ಲಿ ನೀರಿನ ಕೊರತೆಯನ್ನು ಪರಿಹರಿಸಲು ಅವರು ಮಾಡಿದ ಕಾಯಕವನ್ನು ವಿವರಿಸಿದರು. ಆಧುನಿಕ ಭಗೀರಥ ಕಾಮೇಗೌಡರು ತಮ್ಮ ಸ್ವಂತ ಉಳಿತಾಯದಿಂದ ಕೆರೆಗಳನ್ನು ತೋಡಿ, ಬಂಜರು ಗುಡ್ಡವನ್ನು ಕೆರೆಗಳನ್ನಾಗಿ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದ್ದರು.

ಹಿಂದಿನ ಎಚ್‌.ಡಿ ಕುಮಾರಸ್ವಾಮಿ ಸರ್ಕಾರವು ನವೆಂಬರ್ 2018 ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಅವರ ಕೆಲಸವನ್ನು ಗುರುತಿಸಿದೆ. ಕರ್ನಾಟಕ ಸರ್ಕಾರವು ಅವರಿಗೆ ಎಲ್ಲಾ ವರ್ಗದ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಜೀವಮಾನದ ಉಚಿತ ಬಸ್ ಪಾಸ್ ಅನ್ನು ಸಹ ನೀಡಿ ಗೌರವಿಸಿದೆ.

ಕಾಮೇಗೌಡರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.