ವಾಣಿಜ್ಯ ಜಾಹಿರಾತು
ಉಡುಪಿ: ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಈ ಕೆಳಗಿನಂತೆ ಪ್ರಯಾಣದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಅಕ್ಟೋಬರ್ 1 ರಿಂದ 1.5 ಕಿ.ಮೀಟರ್‌ವರೆಗೆ ಕನಿಷ್ಠ ದರ ರೂ.40.00 ಆಗಿದ್ದು ನಂತರದ ಪ್ರತಿ ಕಿ.ಮೀಟರ್‌ಗೆ ದರ ರೂ.20.00 ನಿಗದಿಪಡಿಸಲಾಗಿದೆ.
ಆದುದರಿಂದ ಉಡುಪಿ ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕ/ಮಾಲಕರು ತಮ್ಮ ಅಟೋರಿಕ್ಷಾಗಳಿಗೆ ಕಾನೂನಿನ ಪ್ರಕಾರ ಅನುಮತಿ ಇರುವ ಕಡ್ಡಾಯವಾಗಿ ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸಪ್ಟೆಂಬರ್ 31 ರ ಒಳಗೆ ಕಡ್ಡಾಯವಾಗಿ ‘ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳತಕ್ಕದ್ದು. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಆರ್ ಟಿ ಒ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಜಾಹಿರಾತು