ವಾಣಿಜ್ಯ ಜಾಹಿರಾತು

ಜಗತ್ತು ಹಲವು ವಿಸ್ಮಯಗಳನ್ನು ತನ್ನೊಳಗಿರಿಸಿಕೊಂಡಿದೆ. ಮೀನು ರೆಕ್ಕೆಗಳನ್ನು ಬಳಸಿ ಈಜುವುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮೀನು ರೆಕ್ಕೆಗಳನ್ನು ಕಾಲುಗಳಂತೆ ಬಳಸಿ ನಡೆದಾಡುತ್ತಿರುವುದು ನೋಡುಗರನ್ನು ಅಚ್ಚರಿಗೊಳಿಸಿದೆ.
ನೋಡಲು ವಿಚಿತ್ರವಾಗಿರುವ ಈ ಜೀವಿ ಶಾರ್ಟ್‍ನೋಸ್ ಬ್ಯಾಟ್‍ಫಿಶ್ ಮಧ್ಯ ಅಮೆರಿಕಾದ ಹೊಂಡುರಾಸ್‍ನ ರೋಟಾನ್ ದ್ವೀಪದಲ್ಲಿ ಕಾಣಿಸಿಕೊಂಡಿದೆ. ಫ್ರೆಂಚ್ ಕೀ ಕಟ್ ಚಾನೆಲ್ ಈ ದೃಷ್ಯವನ್ನು ಸೆರೆಹಿಡಿದಿದೆ.
ಈ ಮೀನು ನಿಧಾನವಾಗಿ, ಕ್ರಮಬದ್ಧವಾಗಿ ನಡೆಯುತ್ತದೆ. ಇದು ಸಣ್ಣ ಏಡಿಗಳು ಮತ್ತು ಸಣ್ಣ ಮೀನುಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ.
ಈ ಸಮುದ್ರ ಜೀವಿ ಇದುವರೆಗೆ ನಾನು ನೋಡಿದ ಅತ್ಯಂತ ವಿಚಿತ್ರಗಳಲ್ಲಿ ಒಂದು ಎಂದು ಈ ಪ್ರದೇಶದಾದ್ಯಂತ ಸಮುದ್ರಜೀವನ ನಡೆಸಿದ, ಮೀನನ್ನು ಗುರುತಿಸಿದ ಮಿಕ್ಕಿ ಚಾರ್ಟರಿಸ್ ಹೇಳಿದ್ದಾರೆ.
ಈ ಮೀನು ಯಾವಾಗಲೂ ನಡೆಯುವುದಿಲ್ಲ, ಅಗತ್ಯವಿದ್ದಾಗ, ವೇಗವಾಗಿ ತಪ್ಪಿಸಿಕೊಳ್ಳುವ ಸಂದರ್ಭವಿದ್ದಾಗ ಈಜುತ್ತದೆ. ಇದು ಯುನಿಕಾರ್ನ್‍ನೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಕಂದು ಬಣ್ಣದ ಸ್ಪಂಜಿನ ಉಂಡೆಯನ್ನು ಹೋಲುವಂತಿದೆ ಎಂದು ತಿಳಿಸಿದ್ದಾರೆ. ಮೀನು ನಡೆದಾಡುವ ವಿಡಿಯೋ ವೈರಲ್ ಆಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.