ಮುಂಬೈ: ಪ್ರತಿಷ್ಟಿತ ಫೋರ್ಬ್ಸ್ ನಿಯತಕಾಲಿಕೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸೆಲೆಬ್ರಿಟಿಗಳಿಂದ ಕೂಡಿರುವ ವಿಶೇಷ ಸಂಚಿಕೆಯೊಂದನ್ನು ಬಿಡುಗಡೆ ಮಾಡಿದೆ. ಫೋರ್ಬ್ಸ್ ರಿಲೀಸ್ ಮಾಡಿರುವ ಸೌತ್ ಸೆಲೆಬ್ರಿಟಿ ಸ್ಪೆಷಲ್ ಎಡಿಷನ್‌ನಲ್ಲಿ ಕನ್ನಡದ ನಟ ಯಶ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಕೆಜಿಎಫ್ ಸಿನಿಮಾ ತೆರೆಕಂಡ ನಂತರದಲ್ಲಿ ಯಶ್ ಹೆಸರು ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಸದ್ಯ ಫೋರ್ಬ್ಸ್ ಸೆಲೆಬ್ರಿಟಿ ಸ್ಪೆಷಲ್ ಮ್ಯಾಗಝೀನ್’ನಲ್ಲೂ ಯಶ್ ಮಿಂಚಿದ್ದಾರೆ ಕಪ್ಪು ಬಣ್ಣದ ಕೋಟ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಡಿಫರೆಂಟ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಯಶ್ ಫೋಟೋ ವೈರಲ್ ಆಗುತ್ತಿದ್ದಂತೆ ಕೆಜಿಎಫ್ ಚಾಪ್ಟರ್ 2 ಹಾಗೂ ಯಶ್ ಬಾಸ್ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿದೆ.
ಉಳಿದಂತೆ ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಕರ್ ಸಲ್ಮಾನ್ ಈ ಎಡಿಷನ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಇತರ ಸೆಲೆಬ್ರಿಟಿಗಳಾಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ.
ಫೋರ್ಬ್ಸ್ ಮ್ಯಾಗಜಿನ್ ತುಂಬಾನೇ ಫೇಮಸ್. ಇದರ ಮುಖಪುಟದಲ್ಲಿ ಫೋಟೋ ಬರಬೇಕು ಎಂದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಬೇಕು. ಈ ಮ್ಯಾಗಜಿನ್ ದೇಶಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ಆದರೆ, ಇದೇ ಮೊದಲಬಾರಿಗೆ ಫೋರ್ಬ್ಸ್ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್ ರಿಲೀಸ್ ಮಾಡಿದೆ.
ಅಂದರೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯನ್ನು ಈ ಎಡಿಷನ್‌ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್ ಸಲ್ಮಾನ್ ಫೋಟೋ ಮ್ಯಾಗಜಿನ್ ಮುಖಪುಟದಲ್ಲಿದೆ.
Catch the first-ever South celebrity special of Forbes India. We celebrate four film industries—Telugu, Tamil, Malayalam and Kannada, and raise a toast to its biggest stars, some who've gained pan India fame. Catch our very special issue, on stands now! pic.twitter.com/V6ft1b0iHO
— Forbes India (@forbes_india) October 11, 2021