ವಾಣಿಜ್ಯ ಜಾಹಿರಾತು

ಬಾಲಿವುಡ್ ನಟ ಸುಶಾಂತ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸಲು ತನಿಖಾ ತಂಡಕ್ಕೆ ಸೇರಿದ್ದ ಹಿರಿಯ ಐಪಿಎಸ್ ಅಧಿಕಾರಿ ಇದೀಗ ಕ್ವಾರೆಂಟೈನ್ ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಟ್ನಾದಿಂದ ಪೋಲೀಸರ ತಂಡವೊಂದು ಮುಂಬೈಗೆ ಆಗಮಿಸಿದ್ದು, ಆ ತಂಡದ ನೇತೃತ್ವ ವಹಿಸಿದ್ದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈ ಮಹಾನಗರ ಪಾಲಿಕೆಯವರು ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ.

ಈ ಬಗ್ಗೆ ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೆ ಟ್ವಿಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ನಿರ್ವಹಿಸಲು ಪಾಟ್ನಾದಿಂದ ಮುಂಬೈಗೆ ತೆರಳಿದೆ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಿಎಂಸಿ ಅಧಿಕಾರಿಗಳು ಬಲವಂತವಾಗಿ ಕ್ವಾರೆಂಟೈನ್ ಮಾಡಿದ್ದಾರೆ. ಮನವಿ ಮಾಡಿಕೊಂಡರೂ ಸಹ ಐಪಿಎಸ್ ಮೆಸ್‍ನಲ್ಲಿ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡಿಲ್ಲ ಎಂದು ಡಿಐಜಿ ಗುಪ್ತೇಶ್ವರ್ ಪಾಂಡೆ ಆರೋಪಿಸಿದ್ದಾರೆ.

ಇದೀಗ ಮುಂಬೈ ಕಾರ್ಪೊರೇಷನ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವವರಿಗೆ ವಿಧಿಸಲಾದ ಸ್ಥಳೀಯ ನಿರ್ಬಂಧಗಳ ಪ್ರಕಾರ ವಿನಯ್ ಅವರಿಗೆ 14 ದಿನ ಕ್ವಾರೆಂಟೈನ್ ನಿಗದಿ ಮಾಡಲಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.