ಎಲ್ಲೆಡೆ ನೋಡಿದರೂ ಕಣ್ಣಿಗೂ ನಿಲುಕದಷ್ಟು ದೊಡ್ಡ ದೊಡ್ಡ ದೈತ್ಯ ಕಲ್ಲುಗಳು. ಅದೆಷ್ಟು ಎತ್ತರವೋ, ಅದೆಷ್ಟು ಅಗಲವೋ ಕಣ್ಣಿಗಂತೂ ನಿಲುಕದು. ಯಾವ್ಯಾವುದೋ ಆಕಾರ, ಗಾತ್ರ. ಆದರೆ ಆಶ್ಚರ್ಯ ಅಂದರೆ ಎಲ್ಲವೂ ಇರುವುದು ಹಾವಿನಾಕಾರದಲ್ಲಿ. ಹಾವಿನ ಮೈ, ಬಾಯಿ, ಸುರುಳಿ ನಿಂತ ಹಾವು ಹೀಗೆ ಹಾವಿನ ರೂಪದ ಕಲ್ಲುಗಳೇ ಇರುವ ಇದು ಥಾಯ್ಲೆಂಡಿನ ನಾಗಾಲೋಕ. ಥಾಯ್ ಭಾಷೆಯಲ್ಲಿ ನಾಕಾ ಎಂದರೆ ಹಾವು ಎಂದರ್ಥ. ಹಾವಿನ ರೂಪದಲ್ಲಿರುವ ಬೃಹತ್ ಹಾವುಗಳು ಇಲ್ಲಿರುವ ಕಾರಣ ಈ ಪ್ರದೇಶವನ್ನು ನಾಗಾ ಗುಹೆಗಳೆಂದೇ ಕರೆಯುತ್ತಾರೆ.ನಾಗಾ ಗುಹೆಗಳೆಂದೇ ಕರೆಯಲ್ಪಡುವ ಈ ಪ್ರದೇಶ ಥಾಯ್ಲೆಂಡಿನ ವಾಟ್ ಥಾಮ್ ಜಾಯ್ ನಲ್ಲಿದೆ. ಸುಮಾರು 1 ಲಕ್ಷದಷ್ಟು ಹಳೆಯದಾಗಿರುವ ಈ ನಾಗಾ ಗುಹೆಗಳು ಕಳೆದ ವರ್ಷವಷ್ಟೇ ಕಂಡುಹುಡುಕಲ್ಪಟ್ಟಿವೆ. ಪುಹು ಲಗಾಂಕ ನ್ಯಾಷನಲ್ ಪಾರ್ಕ್‍ನ ಅಧಿಕಾರಿಗಳು ಹಾವಿನ ಈ ಬೃಹತ್ ಕುರುಹುಗಳು ಸುಮಾರು 1 ಲಕ್ಷ ವರುಷದಷ್ಟು ಹಳೆಯದವು ಎಂಬುದನ್ನು ಖಚಿತಪಡಿಸಿದ್ದಾರೆ.
ಗುಹೆಯಲ್ಲಿ ಹಾವಿನ ಬಾಯಿ, ಹಲ್ಲುಗಳು, ಮೈಯನ್ನು ಹೋಲುವ ಬೃಹತ್ ಕಲ್ಲಿನ ರೂಪವಿದೆ. ಅನಾದಿಕಾಲದಲ್ಲಿ ಶಾಪ ದೊರೆತ ಹಾವುಗಳು ಶಾಪಗ್ರಸ್ಥವಾಗಿ ಈ ರೂಪದಲ್ಲಿವೆ ಎಂಬ ಪ್ರತೀತಿಯಿದೆ. ಅಲ್ಲದೆ, ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ದೈತ್ಯ ಹಾವೊಂದು ಸತ್ತ ಬಳಿಕ ಕೊಳೆಯದೆ ನೈಸರ್ಗಿಕವಾಗಿ ಕಲ್ಲಾಗಿರಬಹುದೆಂಬುದು ವೈಜ್ಞಾನಿಕ ವಾದ.
ನಾಕಾ ಕೇವ್ ಅಥವಾ ನಾಗಾ ಗುಹೆ ಎಂದು ಕರೆಯಲ್ಪಡುವ ಈ ಪ್ರದೇಶ ಥಾಯ್ಲೆಂಡ್ ನ ಬುಯಿಂಗ್ ಕಾನ್ ರಾಜ್ಯದ ಬುಯಿಂಗ್ ಕಾಂಗ್ ಲಾಂಗ್ ಜಿಲ್ಲೆಯಲ್ಲಿದೆ. ಇಲ್ಲಿನ ಪುಹು ಲಗಾಂಕದ ನ್ಯಾಷನಲ್ ಪಾರ್ಕ್‍ನಲ್ಲಿ ಈ ನಾಗಾ ಗುಹೆಯಿದೆ. ಈ ನ್ಯಾಷನಲ್ ಪಾರ್ಕ್‍ನಲ್ಲಿ ಮೂರು ಬೆಟ್ಟಗಳಿದ್ದು, ಇದು ಮೆಕೊಂಗ್ ನದಿಯ ತೀರದಲ್ಲಿದೆ. ನಾಗಾ ಗುಹೆಯೊಳಗೆ ಪ್ರವೇಶಿಸುವ ಮೊದಲು ಚಾಯ್ ಮೊಂಗ್ ಕೊನ್ ದೇವಾಲಯ ಸಿಗುತ್ತದೆ.
ಅದ್ಭುತವೆನಿಸುವ ಈ ನಾಗಾಲೋಕ ಪತ್ತೆಯಾದ ನಂತರ ಇಲ್ಲಿಗೆ ಈ ಬೃಹತ್ ಕಲ್ಲುಗಳನ್ನು ನೋಡಲು ಸಾವಿರಾರು ಮಂದಿ ಆಗಮಿಸಿದ್ದರು. ಆದರೆ ಪ್ರವಾಸಿಗರು ಆಗಮಿಸಿ ನಾಗಾ ಕಲ್ಲುಗಳನ್ನು ಹಾನಿ ಮಾಡಿದ ನಂತರ ಇಲ್ಲಿಗೆ ಟೂರಿಸ್ಟ್ ವಿಸಿಟರ್ಸ್ ಆಗಮಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಪುರಾತನ ಕುರುಹುಗಳನ್ನು ಜೋಪಾನವಾಗಿ ಕಾಪಾಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಬಳಿಕವಷ್ಟೇ ಪ್ರವಾಸಿಗರಿಗೆ ಅನುಮತಿ ನೀಡುವುದಾಗಿ ಬುಕ್ ಕೊಂಗ್ ಲೊಂಗ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಪಗ್ರಸ್ಥ ದೈತ್ಯ ಹಾವುಗಳು ಕಲ್ಲಾಗಿರುವ ಥಾಯ್ಲೆಂಡಿನ ನಾಗಾಲೋಕ..!
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು