ಉಗುರುಗಳನ್ನು ಆರೋಗ್ಯವಾಗಿಡಬೇಕಾದರೆ ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆರೋಗ್ಯವಂತ ಉಗುರುಗಳು ಎಲ್ಲರನ್ನೂ ಆಕರ್ಷಿಸುತ್ತದೆ.
ಆರೋಗ್ಯವಂತ ಉಗುರುಗಳನ್ನು ಪಡೆಯಲು ಕೆಲವೊಂದು ಟಿಪ್ಸ್ ಇಲ್ಲಿವೆ.
1. ಉಗುರುಗಳಿಗೆ ಮತ್ತು ಅದರ ಹೊರ ಪದರಕ್ಕೆ ಪೆಟ್ರೋಲಿಯಂ ಜೆಲ್ ಅನ್ನು ಪ್ರತಿದಿನ ಹಚ್ಚಬೇಕು.
2. ದಿನದ ಮನೆ ಕೆಲಸಗಳನ್ನು ಮಾಡುವಾಗ ರಾಸಾಯನಿಕಗಳು ಉಗುರುಗಳಿಗೆ ಸೋಕುವುದು ಸಾಮಾನ್ಯ. ಅದಕ್ಕಾಗಿ ಕೆಲಸದ ಸಮಯದಲ್ಲಿ ಕೈಗಳಿಗೆ ರಬ್ಬರ್ ಗ್ಲೌಸ್‌ಗಳ ಬಳಕೆ ಆರಂಭಿಸಿ ಮತ್ತು ಪಾದದಳಿಗೆ ಉತ್ತಮ ಗುಣಮಟ್ಟದ ಸಾಕ್ಸ್ ಬಳಸಿ.
3. ಪ್ರತೀನಿತ್ಯ ಉಗುರು ಮತ್ತು ಹೊರಪದರಕ್ಕೆ ಸರಿಯಾಗಿ ಮಸಾಜ್ ಮಾಡಬೇಕು ಮತ್ತು ಸಾರಭೂತ ತೈಲ ಅಥವಾ ‘ಮಿಟಮಿನ್ ಇ’ ತೈಲವನ್ನು ಹಚ್ಚಬೇಕು.
4. ಪ್ರತೀದಿನ 2-3 ಬಾರಿ ತೆಂಗಿನಎಣ್ಣೆಯನ್ನು ಬಳಸುವುದರಿಂದ ಉಗುರುಗಳು ಗಟ್ಟಿಯಾಗಿ ಹಾಗೂ ತೇವಾಂಶದಿಂದ ಕೂಡಿದ್ದು, ಉದ್ದ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
5. ಮಿಟಮಿನ್ ಇ ಮಾತ್ರೆಯ ಎಣ್ಣೆಯನ್ನು ತೆಗೆದು ಉಗುರುಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಉಗುರುಗಳು ಮಾಯಿಶ್ಚರೈಸ್‌ಗಳಿಂದ ತುಂಬಿದ್ದು, ಬೇಗವಾಗಿ ಬೆಳೆಯುತ್ತವೆ.
6. ಬಿಸಿ ಎಣ್ಣೆಯಿಂದ ಉಗುರುಗಳಿಗೆ ಮಸಾಜ್ ಮಾಡುವುದರಿಂದ ಉಗುರುಗಳ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯವನ್ನು ಮಾಡುತ್ತದೆ.
7. ಉಗುರು ಬೆಚ್ಚಗಿನ ಗ್ರೀನ್ ಟೀಯಲ್ಲಿ ಉಗುರುಗಳನ್ನು 10-15 ನಿಮಿಷಗಳ ಕಾಲ ಅದ್ದಿ ಇಡುವುದರಿಂದ ಉಗುರುಗಳನ್ನು ಬಲಶಾಲಿಯಾಗಿಸುತ್ತದೆ.