ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತರುತ್ತಿರುವ ಕೃಷಿ ಸುಗ್ರೀವಾಜ್ಞೆ ವಿಧೇಯಕವನ್ನು ವಿರೋಧಿಸಿ ಕೇಂದ್ರ ಸಚಿವೆ ಮತ್ತು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಲೋಕ ಸಭಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ.
ಪ್ರಧಾನಿಗಳ ಸಲಹೆ ಮೇರೆಗೆ ರಾಷ್ಟ್ರಪತಿಗಳು ಹರ್ಸಿಮ್ರತ್ ಕೌರ್ ಅವರ ಆಹಾರ ಸಂಸ್ಕರಣಾ ಕೈಗಾರಿಕೆ ಖಾತೆಗೆ ಪ್ರಭಾರಿಯಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನೇಮಕ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಕೇಂದ್ರ ಸಚಿವ ಸ್ಥಾನಕ್ಕೆ ಪಕ್ಷದ ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಲಿದ್ದಾರೆ ಎಂದು ಅಕಾಲಿದಳ ಘೋಷಿಸಿತ್ತು. ಇದರ ಬೆನ್ನಲ್ಲೆ ಹರ್‌ಸಿಮ್ರತ್ ರಾಜೀನಾಮೆ ನಿರ್ಧಾರವನ್ನು ಟ್ವೀಟ್ಟರ್ ಮೂಲಕ ಪ್ರಕಟಿಸಿದ್ದರು.
President Kovind accepts Harsimrat Badal's resignation from Union Council of Ministers
Read @ANI Story | https://t.co/a0PLt0sKcX pic.twitter.com/HBwyLIt8om
— ANI Digital (@ani_digital) September 18, 2020