ಜು.31ರಿಂದ ‘ಹವಾಲಾ’ ಹವಾ

0
ವಾಣಿಜ್ಯ ಜಾಹಿರಾತು

ನಟ ಅಮಿತ್ ರಾವ್ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿದ್ದರೂ, ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ ಯಲ್ಲಿ ಕಿಶೋರ್ ಪಾತ್ರದಿಂದಾಗಿ ಎಲ್ಲರಿಗೂ ಚಿರಪರಿಚಿತ. ಇದುವರೆಗೆ ಕಿರುತೆರೆ , ಬೆಳ್ಳಿತೆರೆಯಲ್ಲಿ ನಟನಾಗಿ, ಸಹನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಅಮಿತ್ ರಾವ್ ಇದೀಗ ಕನ್ನಡ , ತಮಿಳು ಚಿತ್ರವೊಂದರ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆ ಚಿತ್ರದ ಹೆಸರು ‘ಹವಾಲಾ’.


ಅಮಿತ್ ರಾವ್ ನಿರ್ದೇಶನದ ‘ಹವಾಲಾ’ ಚಿತ್ರ ಇದೇ ತಿಂಗಳ 31 ರಂದು ಬಿಡುಗಡೆಗೊಳ್ಳಲಿದೆ. 10 ಒಟಿಟಿ ಫ್ಲ್ಯಾಟ್ ಫಾರಂಗಳಲ್ಲಿ ಚಿತ್ರ ತೆರೆ ಕಾಣಲಿದೆ. ಈ ಚಿತ್ರವನ್ನು ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಿಸಲಾಗಿದ್ದು, ಭೂಗತ ಲೋಕದ ಕಥೆಯನ್ನು ಹೊಂದಿದೆ. ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು , ಪ್ರವೀಣ್ ಶೆಟ್ಟಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ್ ಮತ್ತು ಅಮೂಲ್ಯ ಹಾಗೂ ಅಮಿತ್ ರಾವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

ಈ ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನ ಅಮಿತ್ ರಾವ್ ಅವರದ್ದೇ. ಇನ್ನು ಚಿತ್ರಕ್ಕೆ ಕಿಶೋರ್ ಎಕ್ಸಾ ಸಂಗೀತ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಮಿತ್ ರಾವ್ ಅವರು ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ಮಾತ್ರವಲ್ಲದೇ ಕೋಸ್ಟಲ್ ವುಡ್ ನ ‘ಡೊಂಬರಾಟ’ ಸಿನಿಮಾದಲ್ಲಿ ನಾಯಕನಾಗಿ ಹಾಗೂ ಇನ್ನಿತರ ಹಲವು ಸಿನಿಮಾಗಳಲ್ಲಿ ನಟರಾಗಿ, ಸಹನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.