ತುಳುನಾಡಿನ ಕಥೆಯನ್ನೇ ಒಳಗೊಂಡಿರುವ ಕಾಂತಾರ ಸಿನಿಮಾ ತುಳು ಭಾಷೆಯಲ್ಲೂ ಬಿಡುಗಡೆ ಆಗಬೇಕು ಎಂದು ಸಾಕಷ್ಟು ಮಂದಿಯ ಅಭಿಪ್ರಾಯವಾಗಿತ್ತು. ಇದನ್ನು ಸ್ವತಃ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.
ಇದೀಗ ತುಳು ಕಾಂತಾರ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿನಿಮಾದ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಿದೆ. ಕಾಂತಾರ ತುಳು ಭಾಷೆಯ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲ್ಸ್ಮ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದೆ.
ಕಾಂತಾರ ತುಳು ಟ್ರೈಲರ್ನಲ್ಲಿ ರಿಷಬ್ ಶೆಟ್ಟಿ ಡೈಲಾಗ್ ಸಹಜವಾಗಿ ಮೂಡಿ ಬಂದಿದ್ದರೂ ನಟ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಇನ್ನೂ ಕೆಲವು ನಟರ ಡೈಲಾಗ್ ಸ್ವಲ್ಪ ವಿಶೇಷ ಎನಿಸುತ್ತದೆ. ಆದರೆ ಟ್ರೈಲರ್ ಯಾವುದೇ ದೋಷವಿಲ್ಲದೆ ಸುಂದರವಾಗಿಯೇ ಮೂಡಿ ಬಂದಿದೆ.
400 ಕೋಟಿ ಕಲೆಕ್ಷನ್ ಮಾಡಿರುವ ಕಾಂತಾರ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದ್ದು ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾ ನೋಡುತ್ತಿದ್ದಾರೆ. ಈಗಾಗ್ಲೆ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ಮೋಡಿ ಮಾಡಿರುವ ಕಾಂತಾರ ಇದೀಗ ತುಳುವಿನಲ್ಲಿ ತೆರೆಗೆ ಬರ್ತಿರೋದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಸಿನಿಮಾ ನೋಡಲು ತುಳು ಪ್ರೇಕ್ಷಕರು ಕಾದು ಕೂತಿದ್ದಾರೆ.