ವಾಣಿಜ್ಯ ಜಾಹಿರಾತು

ಎಗ್ ಮಂಚೂರಿ ಮಾಡಲು ಬೇಕಾಗುವ ಸಾಮಾಗ್ರಿಗಳು:

ಮೊಟ್ಟೆ-4

ಹಾಲು-1/2 ಬಟ್ಟಲು

ಉಪ್ಪು ರುಚಿಗೆ ತಕ್ಕಷ್ಟು

ಕಾಳು ಮೆಣಸಿನ ಪುಡಿ

ಸಣ್ಣಗೆ ಹೆಚ್ಚಿದ ಈರಳ್ಳಿ

ಕಡಲೆಹಿಟ್ಟು

ಅಕ್ಕಿಹಿಟ್ಟು

ಜೋಳದ ಹಿಟ್ಟು

ಶುಂಠಿಬೆಳ್ಳುಳ್ಳಿ ಪೇಸ್ಟ್

ಎಣ್ಣೆ

ಕ್ಯಾಪ್ಸಿಕಂ

ಸೋಯಾ ಸಾಸ್-1 ಚಮಚ

ವಿನೇಗರ್ ಅರ್ಧ ಚಮಚ

ನೀರು ಅರ್ಧ ಬಟ್ಟಲು

ಮಾಡುವ ವಿಧಾನ:

ಹಂತ 1:

ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು, ನಂತರ ಇದಕ್ಕೆ ಉಪ್ಪು ಮೆನಸಿನ ಪುಡಿ ಈರುಳ್ಳಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ನೀರು ಕುದಿಯುವ ವೇಳೆ ಮೊಟ್ಟೆಯ ಮಿಶ್ರಣ ಇದ್ದ ಪಾತ್ರೆಯನ್ನು ಅದರಲ್ಲಿಟ್ಟು ಆವಿಯಲ್ಲಿ ಮೊಟ್ಟೆಯನ್ನು ಬೇಯಿಸಬೇಕು. ಬೆಂದ ಮೊಟ್ಟೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.

ಹಂತ 2:

ನಂತರ ಮತ್ತೊಂದು ಪಾತ್ರೆಗೆ ಸ್ವಲ್ಪ ಕಡಲೆಹಿಟ್ಟು, ಅಕ್ಕಿಹಿಟ್ಟು, ಜೋಳದ ಹಿಟ್ಟು, ಉಪ್ಪು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ ತುಂಡರಿಸಿದ ಮೊಟ್ಟೆಗಳನ್ನು ಇದರಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಬೇಕು.

ಹಂತ 3:

ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕ್ಯಾಪ್ಸಿಕಂ, ಉಪ್ಪು ಹಾಗೂ ಸೋಯಾ ಸಾಸ್, ವಿನೇಗರ್ ಹಾಕಿ ಮಿಶ್ರ ಮಾಡಬೇಕು.  ನಂತರ ನೀರು ಹಾಕಿ ಕುದಿಯಲು ಬಿಟ್ಟು ಗ್ರೇವಿ ಗಟ್ಟಿಯಾದ ಬಳಿಕ ಕರಿದ ಮೊಟ್ಟೆಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಮಂಚೂರಿ ಸವಿಯಲು ಸಿದ್ಧ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.