ವಾಣಿಜ್ಯ ಜಾಹಿರಾತು

ಇವತ್ತಿನ ದಿನದಲ್ಲಿ ಎಲ್ಲಾ ಮೇಕಪ್ ಸಾಧನಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆಯಾದರೂ ಅವೆಲ್ಲಾ ಆರ್ಟಿಫಿಶಿಯಲ್ ಆಗಿ ತಯಾರಿಸಿರುವಂತದ್ದು. ಆದರೆ ಈ ಎಲ್ಲಾ ಸೌಂದರ್ಯ ಸಾಧನಗಳು ಒಂದಾನೊಂದು ಕಾಲದಲ್ಲಿ ನೈಸರ್ಗಿಕವಾಗಿ ತಯಾರಿಸಲಾಗುತ್ತಿತ್ತು ಅನ್ನೋದು ಅಪ್ಪಟ ಸತ್ಯ. ಹೀಗಾಗಿಯೇ ಆರ್ಯುವೇದದಲ್ಲಿ ಬಳಕೆಯಲ್ಲಿರುವ ಚಂದನ, ಅರಿಶಿನ, ಅಲೋವೆರಾ, ಮೆಹಂದಿ, ಜೇನು ಇವೆಲ್ಲವನ್ನೂ ಇಂದಿಗೂ ಸೌಂದರ್ಯ ಸಾಧನಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಉಗುರಿನ ಸೌಂದರ್ಯಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಲಾಕ್‍ ಡೌನ್ ಸಮಯದಲ್ಲಿ ನೈಲ್ ಪಾಲೀಶ್ ಖರೀದಿಸಲು ಮನೆಯಿಂದ ಹೊರ ಹೋಗುವುದಂತೂ ದೂರದ ಮಾತು. ಹೀಗಾಗಿ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದ ಉಗುರಿನ ಬಣ್ಣ ಸಿದ್ಧಪಡಿಸಲು ಹಲವಾರು ಮಂದಿ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ನೈಸರ್ಗಿಕವಾಗಿ ನೈಲ್ ಪಾಲಿಶ್ ತಯಾರಿಸುವುದು ಹೇಗೆ ನೋಡೋಣ..

ಬೇಕಾದ ಸಾಮಗ್ರಿಗಳು

ಮೆಹಂದಿ ಪೌಡರ್- 2  ಟೇಬಲ್ ಸ್ಪೂನ್

ಬೆಲ್ಲ-50ಗ್ರಾಂ

ಲವಂಗ-20ಗ್ರಾಂ

ಮಾಡುವ ವಿಧಾನ

ಮೊದಲು ಬೆಲ್ಲವನ್ನು ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಇದಕ್ಕೆ ಸ್ಪಲ್ಪ ಲವಂಗವನ್ನು ಸೇರಿಸಿಕೊಳ್ಳಬೇಕು. ನಂತರ ಸ್ಟೌವ್ ಆನ್ ಮಾಡಿ ದೋಸೆ ಹಂಚನ್ನಿಡಬೇಕು. ಅದರ ಮೇಲೆ ಬೆಲ್ಲ ಹಾಗೂ ಲವಂಗವಿರುವ ಪಾತ್ರೆಯನ್ನಿಟ್ಟು ಪ್ಲೇಟ್‍ನಿಂದ ಮುಚ್ಚಿಡಬೇಕು. 10 ನಿಮಿಷಗಳ ಬಳಿಕ ಸ್ಟೌವ್ ನ್ನು ಆಫ್ ಮಾಡಿ, ಪಾತ್ರೆಯನ್ನು ಕೆಳಗಿಸಿ. ಈಗ ಇದಕ್ಕೆ ಮೊದಲೇ ತಯಾರಿಸಿಟ್ಟುಕೊಂಡಿರುವ ಮೆಹಂದಿ ಪೌಡರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ತಣ್ಣಗಾಗಲು ಬಿಡಬೇಕು. ಅರ್ಧಗಂಟೆ ಕಳೆದ ಬಳಿಕ ಇದನ್ನು ಉಗುರುಗಳಿಗೆ ಹಚ್ಚಿಕೊಳ್ಳಬಹುದು. ದೀರ್ಘಕಾಲದ ತನಕ ಈ ನೇಲ್ ಕಲರ್ ನಿಮ್ಮ ಉಗುರುಗಳಲ್ಲಿ ನಿಲ್ಲುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.