ಕಾಲ ಅದೆಷ್ಟೇ ಬದಲಾದರೂ ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ಮಹತ್ವದ ಸ್ಥಾನವಿದೆ. ಅದೆಷ್ಟೇ ಮಾಡರ್ನ್, ಟ್ರೆಂಡೀ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರೂ ಹೆಣ್ಣುಮಕ್ಕಳ ವಾರ್ಡ್ ರೋಬ್ ನಲ್ಲಿ ಸೀರೆಗೆ ಸ್ಪೆಷಲ್ ಸ್ಥಾನವಿದೆ. ಜೀನ್ಸ್, ಡೆನಿಮ್, ಕುರ್ತಾ, ಸಲ್ವಾರ್ ಕಮೀಜ್, ಶರಾರ ಸೆಟ್ ಅಂತ ಅದೆಷ್ಟೋ ಟ್ರೆಂಡೀ ಬಟ್ಟೆಗಳು ಬಂದರೂ ಹಬ್ಬಹರಿದಿನಗಳು, ಮದುವೆ-ಸಮಾರಂಭ, ಪೂಜೆ-ಪುನಸ್ಕಾರ ಅಂತ ಬಂದಾಗ ಹೆಣ್ಣುಮಕ್ಕಳ ಮೊದಲ ಆದ್ಯತೆ ಸೀರೆಗೆ ಮೀಸಲಾಗಿರುತ್ತದೆ.ಆದರೆ, ಅದೆಷ್ಟೋ ಮಂದಿ ಸೀರೆ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಡವುತ್ತಾರೆ ಅನ್ನೋದು ವಾಸ್ತವ. ಇಷ್ಟವಾದ ಡಿಸೈನ್, ಫೇವರಿಟ್ ಕಲರ್ ಸೀರೆ ಸಿಕ್ಕರೆ ಇಟ್ ಲುಕ್ಸ್ ಪರ್ಫೆಕ್ಟ್ ಅನ್ನೋದು ಹಲವರ ಅಭಿಪ್ರಾಯ. ಆದರೆ, ಹಾಗಲ್ಲ ಸೀರೆ ಆಯ್ಕೆ ಮಾಡಿಕೊಳ್ಳುವಾಗ, ನಮ್ಮ ಹೈಟ್ ಗೆ ಸೂಟ್ ಆಗುವ ಸೀರೆ ಆರಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ತಪ್ಪಾದಲ್ಲಿ ಸೀರೆ ಅದೆಷ್ಟು ಕಾಸ್ಟ್ಲೀ ಆದರೂ, ಸೀರೆ ತುಂಬಾ ಹೆವಿ ವರ್ಕ್ ಇದ್ದರೂ ಅದು ಸೂಟ್ ಅನಿಸುವುದಿಲ್ಲ.
ಮೊದಲಿನಿಂದಲೂ ಶಾರ್ಟ್ ಇದ್ದವರು ಸೀರೆ ಉಟ್ಟರೆ ಇನ್ನಷ್ಟು ಕುಳ್ಳಗೆ ಕಾಣುತ್ತಾರೆ ಅನ್ನೋ ಅಭಿಪ್ರಾಯವಿದೆ. ಆದರೆ ಸರಿಯಾದ ಸೀರೆ ಆಯ್ಕೆ ಮಾಡಿಕೊಂಡರೆ ಕುಳ್ಳಗಿರುವವರು ಸಹ ಸೀರೆಯಲ್ಲಿ ಸುಂದರವಾಗಿ ಕಾಣಿಸಬಹುದು.ಹೈಟ್ ಕಡಿಮೆಯಿರುವವರಿಗೆ ಯಾವ ರೀತಿಯ ಸೀರೆ ಉತ್ತಮ
ಸೀರೆಯ ಫ್ಯಾಬ್ರಿಕ್ ಸಹ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಹಗುರವಾದ ಫ್ಯಾಬ್ರಿಕ್ ನಿಂದ ತಯಾರಿಸಿದ ಸೀರೆ ಉಡುವುದರಿಂದ ಕುಳ್ಳಗಿರುವವರು ಹೆಚ್ಚು ಉದ್ದ ಕಾಣುತ್ತಾರೆ. ಉದ್ದ ಕಡಿಮೆ ಇರುವವರು ಶಿಫಾನ್, ಜಾರ್ಜೆಟ್, ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಅಗಲವಾದ ಬಾರ್ಡರ್ ಇರುವ ಸೀರೆ ಕುಳ್ಳಗಿರುವವರಿಗೆ ಸೂಕ್ತವಲ್ಲ. ಇದು ಅವರನ್ನು ಮತ್ತಷ್ಟು ಕಡಿಮೆ ಹೈಟ್ ಇರುವಂತೆ ಕಾಣಿಸುತ್ತದೆ. ಬದಲಾಗಿ ಸಿಂಪಲ್ ಆಗಿರುವ ಸಣ್ಣಂಚಿನ ಬಾರ್ಡರ್ ಇರುವ ಸೀರೆ ಉಟ್ಟರೆ ಒಳ್ಳೆಯದು.ದೊಡ್ಡ ಪ್ರಿಂಟ್ ಇರುವ ಸೀರೆಗಳು ಕುಳ್ಳಗಿರುವವರಿಗೆ ಒಪ್ಪುವುದಿಲ್ಲ. ಬದಲಾಗಿ ಸಣ್ಣ ಸಣ್ಣ ಪ್ರಿಂಟ್ ಇರುವ ಸೀರೆಯನ್ನು ಉಟ್ಟರೆ ಹೈಟ್ ಇರುವಂತೆ ಕಾಣಿಸುತ್ತಾರೆ. ಸೀರೆಯಲ್ಲಿ ಉದ್ದವಾದ ಡಿಸೈನ್ ನ ಬದಲು ವರ್ಟಿಕಲ್ ಡಿಸೈನ್ ಇರುವ ಸೀರೆ ಆಯ್ಕೆ ಮಾಡುವುದು ಒಳ್ಳೆಯದು.
ಯಾವ ರೀತಿಯ Accessories ಉತ್ತಮ
ಸೀರೆಯ ಜತೆಗೆ Accessories ಕೂಡಾ ಹೆಚ್ಚಿನ ಮಹತ್ವ ವಹಿಸುತ್ತದೆ. ಶಾರ್ಟ್ ಇರುವವರು ಸೀರೆ ಉಟ್ಟಾಗ ಹೀಲ್ಸ್ ಧರಿಸುವುದರಿಂದ ಹೆಚ್ಚು ಹೈಟ್ ಕಾಣುತ್ತಾರೆ. ಇನ್ನು ಜ್ಯುವೆಲ್ಲರಿ ಬಳಸುವಾಗ ಶಾರ್ಟ್ ಇರುವವರು ಹೆಚ್ಚು ಜ್ಯುವೆಲ್ಲರಿ ಬಳಸುವುದರಿಂದ ಇನ್ನಷ್ಟು ಕುಳ್ಳಗೆ ಕಾಣಿಸುತ್ತಾರೆ. ಹೆವಿ ನೆಕ್ಲೇಸ್ ಧರಿಸಿದರೆ ಸಿಂಪಲ್ ಇಯರಿಂಗ್ಸ್, ಬ್ಯಾಂಗಲ್ಸ್ ಬಳಸುವುದು ಒಳ್ಳೆಯದು.ಹೈಟ್ ಜಾಸ್ತಿ ಇರುವವರಿಗೆ ಯಾವ ರೀತಿಯ ಸೀರೆ..?
ಉದ್ದಗಿರುವವರು ಪ್ಲೈನ್ ಸಾರಿ ಉಡುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ದೊಡ್ಡ ಬಾರ್ಡರ್ ನ ಸೀರೆ ಹೈಟ್ ಇರುವವರಿಗೆ ಚೆನ್ನಾಗಿ ಒಪ್ಪುತ್ತದೆ. ದೊಡ್ಡ ಪ್ರಿಂಟ್, ಡಿಸೈನ್ ನ ಸೀರೆಯನ್ನು ಹೈಟ್ ಇರುವವರು ಪರ್ಫೆಕ್ಟ್ ಲುಕ್ ನಲ್ಲಿ ಕ್ಯಾರಿ ಮಾಡಬಹುದು.