ವಾಣಿಜ್ಯ ಜಾಹಿರಾತು
ಭಾರತದಲ್ಲಿ ಕೋವಿಡ್-೧೯ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಈವರೆಗೆ ೬,೨೪,೫೪೪ ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ ಸುಮಾರು ೩,೭೯,೮೯೧ ಮಂದಿ ಗುಣಮುಖರಾಗಿದ್ದು, ೧೮,೨೧೩ ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂದಿನವರೆಗೆ ಒಟ್ಟು ೧೬,೫೧೪ ಮಂದಿಗೆ ಕೋವಿಡ್-೧೯ ಪಾಸಿಟಿವ್ ಕಂಡುಬಂದಿದೆ. ಇದರಲ್ಲಿ ೨೫೩ಮಂದಿ ಸಾವನ್ನಪ್ಪಿದ್ದು, ೮,೦೬೫ ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಉಡುಪಿಯಲ್ಲಿ ೧೨೨೮ಮಂದಿಗೆ ಸೋಂಕು ತಗುಲಿದ್ದು, ೧೦೫೮ಮಂದಿ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ದ.ಕ ಜಿಲ್ಲೆಯಲ್ಲಿ ೮೨೫ ಮಂದಿಗೆ ವೈರಸ್ ಹರಡಿದ್ದು, ಅದರಲ್ಲಿ ೪೦೨ಮಂದಿ ಗುಣಮುಖರಾಗಿದ್ದರೆ, ೧೮ ಮಂದಿ ಸಾವನ್ನಪ್ಪಿದ್ದಾರೆ.
ವಾಣಿಜ್ಯ ಜಾಹಿರಾತು