ಒಡಿಶಾ: ಭಾರತ, ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ನಡೆಸಲಾಯಿತು.
ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ, ಅಗ್ನಿ ಪ್ರಧಾನ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಈ ಕ್ಷಿಪಣಿ, ಸುಮಾರು ಎರಡು ಸಾವಿರ ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಹಲವು ನೂತನ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚು ನಿಖರತೆ ಹೊಂದಿದೆ ಎಂದು ತಿಳಿದುಬಂದಿದೆ.
#WATCH | Today India successfully testfired the nuclear-capable strategic Agni Prime missile off the coast of Odisha from Balasore.
(Source: DRDO) pic.twitter.com/wSgWKOKtQG
— ANI (@ANI) December 18, 2021
ಕ್ಷಿಪಣಿಯ ಈ ಹಿಂದಿನ ಪರೀಕ್ಷೆಯನ್ನು ಜೂನ್ 28ರಂದು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಕ್ಷಿಪಣಿ ಶೀಘ್ರದಲ್ಲಿ ರಕ್ಷಣಾ ಇಲಾಖೆಯ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.