ವಾಣಿಜ್ಯ ಜಾಹಿರಾತು

ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169ಎ) ಕಾಮಗಾರಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅ.1ರಿಂದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ತಯಾರಿ ನಡೆಸಲಾಗಿದ್ದು, ಈ ಮಾರ್ಗದಲ್ಲಿ ಘನ ವಾಹನ ಸಂಚಾರಕ್ಕೆ ನಿಷೇಧ ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಅ.1ರಿಂದ 45 ದಿನಗಳವರೆಗೆ ಕಾರು, ದ್ವೀಚಕ್ರ ವಾಹನ, ಬಸ್ಸು ಹೊರತುಪಡಿಸಿ ಇತರೆ ಘನ ವಾಹನಗಳಿಗೆ (ಮಲ್ಟಿ ಎಕ್ಸೆಲ್‌ ಮಾದರಿಯ ವಾಹನಗಳು) ಪ್ರವೇಶವಿಲ್ಲ.

ಘನ ವಾಹನಗಳ ಬದಲಿ ಮಾರ್ಗ ಇಂತಿದೆ :

ಕುಂದಾಪುರ ಕಡೆಯಿಂದ- ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ ರಸ್ತೆ. ಉಡುಪಿಯಿಂದ ಕಲ್ಸಂಕ-ಗುಂಡಿಬೈಲು, ಎ. ವಿ. ಬಾಳಿಗ ಆಸ್ಪತ್ರೆ ಮೂಲಕ ಮಣಿಪಾಲಕ್ಕೆ, ಕಾರ್ಕಳ, ಹಿರಿಯಡ್ಕದಿಂದ ಮಣಿಪಾಲ, ಪೆರಂಪಳ್ಳಿ, ಅಂಬಾಗಿಲು ಮೂಲಕ ಚಲಿಸಬೇಕು.

ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ- ಪೆರಂಪಳ್ಳಿ- ಅಂಬಾಗಿಲು ರಸ್ತೆ ಮೂಲಕ ಚಲಿಸಬೇಕು.

ಉಡುಪಿಯಿಂದ ಮಣಿಪಾಲಕ್ಕೆ ತೆರಳುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸಬೇಕು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.