ವಾಣಿಜ್ಯ ಜಾಹಿರಾತು

ಜನವರಿ 12ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

ರಾಷ್ಟ್ರೀಯ ಯುವ ದಿನ

ಜ.12ರಂದು ಪ್ರತೀವರ್ಷ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. 1984ರಲ್ಲಿ ಭಾರತದ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. ಈ ದಿನದಂದು ಸ್ವಾಮಿ ವಿವೇಕಾನಂದರು ಭಾರತ ದೇಶಕ್ಕೆ ನೀಡಿದ ಕೊಡುಗೆಯನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಸ್ವಾಮೀ ವಿವೇಕಾನಂದರು 1863 ಜ.12ರಂದು ಜನಿಸಿದರು.

ನ್ಯಾಷನಲ್ ಫಾರ್ಮಸಿಸ್ಟ್ ಡೇ

ಜ.12 ದಿನವನ್ನು ನ್ಯಾಷನಲ್ ಫಾರ್ಮಸಿಸ್ಟ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಔಷಧಿಕಾರರನ್ನು ಗೌರವಿಸುವ ಮತ್ತು ನಮ್ಮ ಸಮಾಜದಲ್ಲಿ ಅವರ ಪ್ರಾಮುಖ್ಯತೆಯನ್ನು ಸ್ಮರಿಸಲಾಗುತ್ತದೆ

1773 ಜ.12ರಂದು ಮೊದಲನೇ ಸಾರ್ವಜನಿಕ ವಸ್ತುಸಂಗ್ರಹಾಲಯವನ್ನು ದಕ್ಷಿಣ ಕೆರೊಲಿನಾದ ಚಾರ್ಲ್ಸ್ಟೌನ್‌ನಲ್ಲಿ ಸ್ಥಾಪಿಸಲಾಯಿತು.

1948 ಜ.12ರಂದು ಶಾಂತಿಯನ್ನು ಪುನಃಸ್ಥಾಪಿಸಲು ಗಾಂಧಿಯವರು ತಮ್ಮ ‘ಅಂತಿಮ ಉಪವಾಸ’ವನ್ನು ಆರಂಭಿಸುವ ಮೂಲಕ ದೆಹಲಿಯಲ್ಲಿ ಕೋಮು ಹಿಂಸಾಚಾರದ ವಿರುದ್ಧ ಹೋರಾಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here