ವಾಣಿಜ್ಯ ಜಾಹಿರಾತು

ಜೂನ್ 25 ರಂದು ಯಾವ ದಿನವನ್ನು ಆಚರಿಸ್ತಾರೆ? ಈ ದಿನದ ವಿಶೇಷತೆ ಹಿನ್ನೆಲೆಗಳ ಬಗ್ಗೆ ತಿಳಿದುಕೊಳ್ಳೋಣ

1975 ರಲ್ಲಿ ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಚುನಾವಣೆಗಳನ್ನು ರದ್ದುಪಡಿಸಿದರು.
ಭಾರತದಲ್ಲಿ ತುರ್ತು ಪರಿಸ್ಥಿತಿಯು ಜೂನ್ -25-1975ರಿಂದ ಮಾರ್ಚ್-21-1977 ರವರೆಗೆ ಜಾರಿಯಲ್ಲಿತ್ತು.ಆ ಸಮಯದಲ್ಲಿ ‘ಫಕ್ರುದೀನ್ ಅಲಿ ಅಹ್ಮದ್’ಭಾರತದ ರಾಷ್ಟ್ರಪತಿಯಾಗಿದ್ದರು ಮತ್ತು ಶ್ರೀಮತಿ ಇಂದಿರಾಗಾಂಧಿ ಯವರು ಪ್ರದಾನಮಂತ್ರಿಯಾಗಿದ್ದರು.
ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ ನಾರಾಯಣ ಅವರು ಪ್ರಚಾರದ ದೊಡ್ಡ ರ್ಯಾಲಿಯಲ್ಲಿ ಇಂದಿರಾ ಗಾಂಧಿಯವರ ಆಡಳಿತದ ವಿರುದ್ಧ ಪೋಲಿಸ್‍ನವರಿಗೂ ಸೈನ್ಯಕ್ಕೂ ಸರ್ಕಾರದ ಆಜ್ಞೆಯನ್ನು ಪಾಲಿಸಬಾರದೆಂದೂ, ಸರ್ಕಾರದ ವಿರುದ್ಧ ದಂಗೆ ಏಳಬೇಕೆಂದೂ ಕರೆ ಇತ್ತರು. ಜನಪ್ರಿಯ ಜಯಪ್ರಕಾಶ ನಾರಾಯನರ ಕರೆ ಬಗೆಗೆ ಪ್ರಧಾನಿಗೆ ಆತಂಕಕ್ಕೆ ಕಾರಣವಾಯಿತು. ಆಗಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಯವರು ಸಂವಿಧಾನದ 352(1)ನೇ ವಿಧಿಯ ಪ್ರಕಾರ’ಆಂತರಿಕ ಕಠಿನ ಪರಿಸ್ಥಿತಿ ಕಾರಣ ನೀಡಿ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡಿದರು. ಇದರ ಪರಿಣಾಮವಾಗಿ ತುರ್ತುಪರಿಸ್ಥಿತಿಯು  ಜಾರಿಯಾಯಿತು

1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತದ ಕ್ರಿಕೆಟ್ ತಂಡ ವೆಸ್ಟ ಇಂಡೀಸ್ ಅನ್ನು ಸೋಲಿಸಿ ಕ್ರಿಕೆಟ್ ವಿಶ್ವ ಕಪ್ ಅನ್ನು ತನ್ನದಾಗಿಸಿಕೊಂಡಿತು.

1975ರಲ್ಲಿ ಮೊಜಾಂಬಿಕ್ ಸ್ವಾತಂತ್ರ್ಯವನ್ನು ಪಡೆಯಿತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.