ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲದೇವಿ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ನಾಯಕ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಾಟಿಕ್ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಉಪಾಧ್ಯಕ್ ಜೋ ಬಿಡೆನ್, ಕಮಲ ಹ್ಯಾರೀಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
ಕಮಲಾದೇವಿ ಅವರ ತಂದೆ ಜಮೈಕಾ ಮೂಲದವರು ಹಾಗೂ ತಾಯಿ ಭಾರತೀಯ ಮೂಲದವರು. ಕಪ್ಪುವರ್ಣಿಯ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಏಷ್ಯಾ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಕಮಲ ದೇವಿ ಈ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜಿಲ್ಲಾ ಅಟರ್ನಿಯಾಗಿ ಮತ್ತು ಕ್ಯಾನಿಪೋರ್ನಿಯಾ ಅಟೊರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
ತಮ್ಮ ಆಯ್ಕೆ ಬಗ್ಗೆ ಪ್ರತಿಕ್ರಿಯ ನೀಡಿರುವ ಕಮಲಾ ಹ್ಯಾರೀಸ್ ` ಇದೇ ಮೊದಲ ಬಾರಿಗೆ ಕಪ್ಪು ವರ್ಣದ ಮಹಿಳೆಯನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು. ಅಮೆರಿಕದ ಮೇಲಿದ್ದ ನನ್ನ ನಂಬಿಕೆ ಗಟ್ಟಿಯಾಗಿದೆ. ಯಶಸ್ಸು ಸಾಧಿಸಲು ಇಲ್ಲಿ ಪ್ರತಿಯೊಬ್ಬರಿಗೆ ಸಹ ಅವಕಾಶವಿದೆ. ಅವರು ಎಲ್ಲಿಂದ ಬಂದರು? ಯಾರು ? ಎಂಬುದು ಇಲ್ಲಿ ಮುಖ್ಯವಲ್ಲ ಎಂಬುದನ್ನು ನನ್ನ ಆಯ್ಕೆ ತೋರಿಸಿಕೊಟ್ಟಿದೆ’ ಎಂದಿದ್ದಾರೆ.
Let’s go win this, @KamalaHarris. pic.twitter.com/O2EYo6rYyk
— Joe Biden (@JoeBiden) August 12, 2020