ವಾಣಿಜ್ಯ ಜಾಹಿರಾತು
ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಮತ್ತು ಅವರ ಮಗಳು ಗೌರಿ ಕೊರಗಜ್ಜನಿಗೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ತಮ್ಮ ಅದ್ಭುತ ನಟನೆಯ ಮೂಲಕವೇ ನಟಿ ಶೃತಿ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇಂದಿಗೂ ಶೃತಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ರಿಯಾಲಿಟಿ ಶೋಗಳ ಜೊತೆಗೆ ಸಿನಿಮಾಗಳಲ್ಲೂ ತೊಡಗಿಕೊಂಡಿರುವ ಶೃತಿ ಸದ್ಯ ‘ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು, ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ನಟಿ ಶ್ರುತಿ ಅಭಿನಯಿಸುತ್ತಿದ್ದಾರೆ. ಈ ವೇಳೆ ದೈವಕ್ಕೆ ಕೋಲ ಸೇವೆ ಮಾಡಿದ್ದಾರೆ. ಕೊರಗಜ್ಜ ಆಧರಿತ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಗಳು ಗೌರಿ ಹಾಗೂ ಸಿನಿಮಾ ತಂಡದ ಜೊತೆ ನಟಿ ಶೃತಿ ಕೊರಗಜ್ಜನಿಗೆ ಕೋಲ ಸೇವೆ ನೀಡಿದ್ದಾರೆ.
ವಾಣಿಜ್ಯ ಜಾಹಿರಾತು