ವಾಣಿಜ್ಯ ಜಾಹಿರಾತು

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ.

ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ , ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪ್ರಶಸ್ತಿ , ಮಾಧ್ಯಮ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿಯನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಪ್ರಕಟಿಸಿದ್ದಾರೆ.

ತುಳು ಜಾನಪದ ಕ್ಷೇತ್ರದಲ್ಲಿ ಸಂಜೀವ ಬಂಗೇರ ತಲಪಾಡಿ, ತುಳು ನಾಟಕ / ಸಿನಿಮಾ ವಿಭಾಗದಲ್ಲಿ ಕೃಷ್ಣಪ್ಪ ಉಪ್ಪೂರು, ತುಳು ಸಾಹಿತ್ಯ ವಿಭಾಗದಲ್ಲಿ ಉಲ್ಲಾಸ ಕೃಷ್ಣ ಪೈ ಪುತ್ತೂರು ೨೦೨೧ನೇ ಸಾಳಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪುಸ್ತಕ ಬಹುಮಾನ ವಿಭಾಗದಲ್ಲಿ ಯೋಗೀಶ್ ಕಾಂಚನ್ ಬೈಕಂಪಾಡಿ ಅವರ ತಞನ ಬೊಳ್ಳಿ ಕವನ ಸಂಕಲನ , ನಾಟಕ ವಿಭಾಗದಲ್ಲಿ ಅಕ್ಷತರಾಜ್ ಪೆರ್ಲ ಅವ್ಅರ ಬೇಲಿ, ಸಾಪೊದ ಕಣ್ಣ್ ನಾಟಕ ಮತ್ತು ಅಧ್ಯಯನ ವಿಭಾಗದಲ್ಲಿ ಡಾ. ಅಶೋಕ್ ಆಳ್ವ ಸುರತ್ಕಲ್ ಅವರ ತುಳುನಾಡಿನ ಪ್ರಾಣಿ ಜಾನಪದ ಅಧ್ಯಯನ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2021 ನೇ ಸಾಲಿನ ಬಾಲಪ್ರತಿಭಾ ಪುರಸ್ಕಾರ ವಿಭಾಗದಲ್ಲಿ ಕು. ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಕು. ಜೀವಿಕಾ ಶೆಟ್ಟಿ ಮುಂಬೈ( ಹೊರ ರಾಜ್ಯ), ಕು. ಸಾನ್ವಿ ಯು ಎಸ್ ಎ ( ಹೊರರಾಷ್ಟ್ರ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .

ಯುವ ಸಾಧಕ ಪುರಸ್ಕಾರ ವಿಭಾಗದಲ್ಲಿ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬೈ ( ಹೊರ ರಾಜ್ಯ), ರಮಾನಂದ ಶೆಟ್ಟಿ ( ಹೊರ ರಾಷ್ಟ್ರ), ಮಾಧ್ಯಮ ಪುರಸ್ಕಾರ ವಿಭಾಗದಲ್ಲಿ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ, ಸಂಘಟನಾ ಪುರಸ್ಕಾರ ವಿಭಾಗದಲ್ಲಿ ಜೈ ತುಳುನಾಡು (ರಿ), ತುಳು ಕೂಟ ಫೌಂಡೇಶನ್ ನಾಲಸೋಪಾರ, ಮುಂಬೈ ( ಹೊರ ರಾಜ್ಯ), ತುಳು ಕೂಟ ಕತಾರ್ (ಹೊರ ರಾಷ್ಟ್ರ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2021 ನೇ ಸಾಲಿನ ಗೌರವ ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಪುಸ್ತಕ ಬಹುಮಾನ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ವಿಶೇಷ ಪುರಸ್ಕಾರವು ರೂ. 10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಅವರು ತಿಳಿಸಿದರು. ಆ.21ರಂದು ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ರಿಜಿಸ್ಟ್ರಾರ್ ಕವಿತಾ, ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಮತ್ತು ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.