ವಾಣಿಜ್ಯ ಜಾಹಿರಾತು

ಮುಂಬೈ: 2022ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಆಗಿ ಕರ್ನಾಟಕ ಉಡುಪಿ ಮೂಲದ ಸಿನಿ ಶೆಟ್ಟಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರದಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ ಇಂಡಿಯಾ ವಿಜೇತರನ್ನು ಘೋಷಿಸಲಾಯಿತು. ರಾಜಸ್ಥಾನದ ರೂಬಲ್ ಶೇಖಾವತ್ ಫೆಮಿನಾ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಫೆಮಿನಾ ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಿಸ್ ಇಂಡಿಯಾ 2020 ತೆಲಂಗಾಣದ ಮಾನಸಾ ವಾರಣಾಸಿ ಸಿನಿ ಶೆಟ್ಟಿಯವರಿಗೆ ಕಿರೀಟ ತೊಡಿಸಿದರು.

ಸಿನಿ ಶೆಟ್ಟಿ ಮೂಲತಃ ಉಡುಪಿಯ ಇನ್ನಂಜೆಯವರಾಗಿದ್ದು, ಮುಂಬೈನಲ್ಲಿ ವಾಸವಾಗಿದ್ದಾರೆ. ಸಿನಿ ಶೆಟ್ಟಿ ಚಾರ್ಟರ್ಡ್ ಫೈನಾಶಿಯಲ್ ಅನಾಲಿಸ್ಟ್ ಕೋರ್ಸ್ ವ್ಯಾಸಾಂಗ ಮಾಡುತ್ತಿದ್ದಾರೆ.

ದೇಶದ ಎಲ್ಲಾ ಮೂಲೆಗಳಿಂದ ವರ್ಚುವಲ್ ಆಡಿಷನ್‌ಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ವಿವಿಧ ರಾಜ್ಯಗಳಿಂದ 31 ಸ್ಪರ್ಧಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ಮಲೈಕಾ ಅರೋರಾ, ವಿನ್ಯಾಸಕರಾದ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ, ನೃತ್ಯ ನಿರ್ದೇಶಕ ಶಿಯಾಮಕ್ ದಾವರ್ ಮತ್ತು ಮಾಜಿ ಕ್ರಿಕೆಟಿಗ ಮಿಥಾಲಿ ರಾಜ್ ಸಂಜೆಯ ತೀರ್ಪುಗಾರರ ಸಮಿತಿಯಲ್ಲಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ಬಾಲಿವುಡ್ ತಾರೆಯರಾದ ಕೃತಿ ಸನೋನ್, ಲಾರೆನ್ ಗಾಟ್ಲೀಬ್ ಮತ್ತು ಆಶ್ ಚಾಂಡ್ಲರ್ ಅವರು ಭಾಗವಹಿಸಿ ಸಮಾರಂಭಕ್ಕೆ ರಂಗು ತುಂಬಿದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.