ಕಾಸರಗೋಡು: ಕೇರಳದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ವಿದ್ಯಾರ್ಥಿನಿ ಅಂಜುಶ್ರೀ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಸಾಯನಿಕ ವರದಿ ಬಂದಿದೆ. ಅಂಜುಶ್ರೀ ಸಾವು ಚಿಕನ್ ಬಿರಿಯಾನಿಯಿಂದ ಆಗಿದಲ್ಲ, ಬದಲಾಗಿ ಇಲಿ ಪಾಷಾಣದಿಂದ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಮಂಜೇಶ್ವರದ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿ ಕಾಸರಗೋಡು ನಗರದ ಹೊರ ವಲಯದ ಹೋಟೆಲ್ ನಿಂದ ಆನ್‌ಲೈನ್ ಮೂಲಕ ಚಿಕನ್ ಬಿರಿಯಾನಿ ಖರೀದಿಸಿ ಸೇವಿಸಿದ್ದರು. ಚಿಕನ್ ಬಿರಿಯಾನಿ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದ ಅಂಜುಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಹೋಟೆಲ್ ನಿಂದ ತರಿಸಿದ್ದ ಆಹಾರ ಸೇವನೆಯಿಂದಲೇ ಅಂಜುಶ್ರೀ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡು ಹೋಟೆಲ್ ಕ್ಲೋಸ್ ಮಾಡಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಹಾರ ತರಿಸಿದ್ದ ಹೋಟೆಲ್‌ನಲ್ಲಿನ ನೀರು ಮತ್ತು ಆಹಾರವನ್ನು ಪರಿಶೀಲಿಸಿದ್ದರು. ಘಟನೆಯ ಕುರಿತು ಆರೋಗ್ಯ ಸಚಿವರ ತನಿಖೆಗೆ ಆದೇಶಿಸಲಾಗಿತ್ತು. ಇದೀಗ ರಾಸಯನಿಕ ವರದಿ ಬಂದಿದ್ದು ಅಂಜುಶ್ರೀ ಸಾವು ಚಿಕನ್ ಬಿರಿಯಾನಿ ಇಂದ ಆಗಿಲ್ಲ, ಬದಲಾಗಿ ಇಲಿ ಪಾಷಾಣದಿಂದ ಎಂದು ವರದಿಯಲ್ಲಿ ತಿಳಿದುಬಂದಿದೆ.