ವಾಣಿಜ್ಯ ಜಾಹಿರಾತು

ಸುಳ್ಯ: ಎರಡು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ಸುಳ್ಯ ತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ.

ಮುಂಜಾನೆ 7.45ರ ಸುಮಾರಿಗೆ ಭೂಮಿ ಕಂಪನವಾಗಿದ್ದು ಜನ ಭಯಬೀತರಾಗಿ ಮನೆಗಳಿಂದ ಹೊರಗೆ ಓಡಿದ್ದಾರೆ. ತಾಲೂಕಿನ ಸುಳ್ಯ ಪಟ್ಟಣ, ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವಚಳ್ಳ, ಜಾಲ್ಸೂರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಸಂಪಾಜೆ ಸೇರಿದಂತೆ ಬಹುತೇಕ ಕಡೆ ಭೂಮಿ ಕಂಪಿಸಿದೆ.

ಇಂದು ಬೆಳಿಗ್ಗೆ 10-15 ಸೆಕೆಂಡುಗಳ ಕಾಲ ಈ ವಿದ್ಯಮಾನ ನಡೆದಿದ್ದು, ಜನರು ಭಯಗೊಂಡಿದ್ದಾರೆ. ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು, ಕೊಡಗು ಜಿಲ್ಲೆಯ ಕರಿಕೆ, ಭಾಗಮಂಡಲ, ಸಂಪಾಜೆ, ಕಾಸರಗೋಡು ಗಡಿಭಾಗ ಪಾಣತ್ತೂರು, ಕಲ್ಲಪ್ಪಳ್ಳಿ ಭಾಗಗಳಲ್ಲೂ ಭೂಕಂಪನ ಅನುಭವವಾಗಿದೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್‌ಗಳು ಕಂಪಿಸಿವೆ. ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.