ವಾಣಿಜ್ಯ ಜಾಹಿರಾತು
ಮೂಡುಬಿದಿರೆ: ತೆಂಗಿನಕಾಯಿ ಕೀಳಲು ಯಂತ್ರ ಬಳಸಿ ಮರ ಹತ್ತಿದ್ದ ಕಾರ್ಮಿಕನೋರ್ವ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.
ವಾಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಅಳಿಯೂರು ಕಂಪೊಟ್ಟು ನಿವಾಸಿ ಸಂದೇಶ್ (44) ಮೃತ ದುರ್ದೈವಿ.
ಮೃತ ಸಂದೇಶ್ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿ ಇರುವ ಇಸಾಕ್ ಎಂಬುವವರ ಮನೆಗೆ ತೆಂಗನಕಾಯಿ ಕೀಳಲು ತೆರಳಿದ್ದರು. ಯಂತ್ರವನ್ನು ಬಳಸಿ ತೆಂಗಿನ ಕಾಯಿಗಳನ್ನು ಕೀಳಲು ಮರವೇರಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಗಡೆ ಇದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮವಾಗಿ ತಲೆಗೆ ಗಂಭೀರವಾಗಿ ಪೆಟ್ಟಾಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಮೂಲತಃ ಕೇರಳದ ಇಡುಕ್ಕಿ ನಿವಾಸಿಯಾಗಿದ್ದ ಸಂದೇಶ್ ಸಾಕಷ್ಟು ವರ್ಷಗಳಿಂದ ಮೂಡಬಿದಿರೆಯಲ್ಲಿ ಕಾರ್ಮಿಕನಾಗಿ ಕೆಲಸಮಾಡಿಕೊಂಡಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಣಿಜ್ಯ ಜಾಹಿರಾತು