ವಾಣಿಜ್ಯ ಜಾಹಿರಾತು
ಮಂಗಳೂರು: ನಗರದ ಹಂಪನ ಕಟ್ಟೆಯ ಜ್ಯುವೆಲರಿ ಅಂಗಡಿ ಯಲ್ಲಿ ಕಳೆದ ಶುಕ್ರವಾರ ಸಿಬ್ಬಂದಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದೀಗ ಆರೋಪಿಯ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಆರೋಪಿ ಪರಾರಿಯಾದ ಆಟೋ ರಿಕ್ಷಾ ಚಾಲಕನನ್ನು ವಿಚಾರಣೆ ಗೊಳಪಡಿಸಿದ್ದಾರೆ.
ಕಳೆದ ಶುಕ್ರವಾರ ಮಧ್ಯಹ್ನ 3.30ರ ಸುಮಾರಿಗೆ ಮುಸುಕುದಾರಿಯೋರ್ವ ಆಗಮಿಸಿ ಜ್ಯುವೆಲ್ಲರಿ ಸಿಬ್ಬಂದಿಯನ್ನು ಭೀಕರವಾಗಿ ಹತ್ಯೆ ಮಾಡಿ ಅಂಗಡಿಯಲ್ಲಿದ್ದ ಒಂದಷ್ಟು ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದ. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅಲ್ಲದೆ ಜ್ಯುವೆಲ್ಲರಿ ಅಂಗಡಿ ಮಾಲಿಕ ಆಗಮಿಸುತ್ತಿದ್ದಂತೆ ಮುಸುಕುದಾರಿ ವ್ಯಕ್ತಿ ಆಟೋದಲ್ಲಿ ಎಸ್ಕೇಪ್ ಆಗಿದ್ದ.
ಆಟೋರಿಕ್ಷಾವೊಂದರಲ್ಲಿ ಆರೋಪಿ ಹೋಗಿದ್ದು ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಯಾವ ಕಡೆ ಹೋಗಿದ್ದ ಎಂಬ ಬಗ್ಗೆ ಪೊಲೀಸರು ಆಟೋ ರಿಕ್ಷಾ ಚಾಲಕನ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಣಿಜ್ಯ ಜಾಹಿರಾತು