ವಾಣಿಜ್ಯ ಜಾಹಿರಾತು

ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳು, ಕೆಲವು ವಿಚಿತ್ರಗಳ ಬಗ್ಗೆ ನಾಸಾ ಆಗಾಗ ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ  ​ ಖಾತೆಯಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಇದೀಗ ‘ಮಂಗಳದ ಹೂವು’ ಎಂದು ಬಣ್ಣಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದು ನೆಟ್ಟಿಗರ ಗಮನಸೆಳೆದಿದೆ.

ಮಂಗಳದ ಬಗ್ಗೆ ಅನ್ವೇಷಿಸಲು ವಿನ್ಯಾಸಗೊಳಿಸಿರುವ ಕ್ಯೂರಿಯಾಸಿಟಿ ಮಾರ್ಸ್ ರೋವರ್ , ಗ್ರಹದ ಮೇಲೈಯಲ್ಲಿರುವ ಹೂವಿನ ಆಕಾರದ ಕಲ್ಲಿನ ಫೋಟೋವನ್ನು ರವಾನಿಸಿದೆ.ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಾಸಾ, ‘ ನಿಲ್ಲಿ, ಈ ಮಂಗಳದ ಹೂವಿನ ಪರಿಮಳ ನೋಡಿ’ ಎಂದು ಬರೆದುಕೊಂಡಿದೆ.

ಫೆ. 24, 2022 ರಂದು, ನಮ್ಮ ಕ್ಯೂರಿಯಾಸಿಟಿ ಮಾರ್ಸ್ ರೋವರ್, ರೆಡ್ ಪ್ಲಾನೆಟ್‌ನ ಪ್ರಾಚೀನ ಗತಕಾಲದ ಕಲಾಕೃತಿಗಳ ಈ ಚಿತ್ರವನ್ನು ಸೆರೆಹಿಡಿದಿದೆ ಎಂದು ನಾಸಾ ಹೇಳಿದೆ. ಈ ಹೂವು ಕ್ಯೂರಿಯಾಸಿಟಿ ಕಂಡುಹಿಡಿದ ಕಲಾಕೃತಿಗಳ ಪುಷ್ಪಗುಚ್ಛಗಳಲ್ಲಿ ಒಂದಾಗಿದೆ ಎಂದು ನಾಸಾ ಹೇಳಿದೆ.

ನಾಸಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ   ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇದುವರೆಗೂ 4.4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.