ವಾಣಿಜ್ಯ ಜಾಹಿರಾತು

ಬಾಲಿವುಡ್ ನ ಖ್ಯಾತ ಯುವ ನಟ ಸುಶಾಂತ್ ಸಿಂಗ್ ಅಕಾಲಿಕ ಮೃತ್ಯು ಪ್ರಕರಣದ ತನಿಖೆಯನ್ನು ಸಿಬಿಐ ಸುಪರ್ಧಿಗೆ ವಹಿಸಿ ವಾರಗಳಷ್ಟೇ ಕಳೆದಿವೆ .ರಾಷ್ಟ್ರೀಯ ದೃಶ್ಯ ಮಾಧ್ಯಮಗಳು ಸೇರಿದಂತೆ ದೇಶದ ಅನೇಕ ಪತ್ರಿಕೆಗಳು ಈ ಪ್ರಕರಣದಲ್ಲಿ ಸುಶಾಂತ್ ಸಾವಿನ ದಿನದಿಂದ ಹಿಡಿದು , ಮುಂಬೈ ಮತ್ತು ಪಾಟ್ನಾ ಪೊಲೀಸರು ಈ ಕೇಸ್ ಕುರಿತಂತೆ ಕೈಗೊಂಡ ಕ್ರಮಗಳ ಬಗೆಗೆ , ವಿವಿಧ ಆಯಾಮಗಳಿಂದ ಈ ಸಾವಿಗೆ ಕಾರಣಗಳನ್ನು ವಿಶ್ಲೇಷಿಸುವುದರಿಂದ ಹಿಡಿದು , ಸಿಬಿಐ ತನಿಖೆಯ ಹಾದಿಯನ್ನು ಎಳೆ ಎಳೆಯಾಗಿ ವೀಕ್ಷಕ ಮಿತ್ರರ ಎದುರು ತೆರೆದಿಡುವ ವರೆಗೆ ಶ್ರಮ ವಹಿಸಿ ಕೆಲಸಮಾಡುತ್ತಿರುವುದನ್ನು ನೀವೆಲ್ಲರೂ ನೋಡಿದ್ದೀರಿ .ಆದರೆ ಈಗಷ್ಟೇ ಸಿಬಿಐ ಕಡೆಯಿಂದ ಈ ಕುರಿತು ಸ್ಪಷ್ಟನೆ ಯೊಂದು ಹೊರಬಿದ್ದಿದೆ.

ಸುಶಾಂತ್ ಪ್ರಕರಣ ದ ತನಿಖೆ ವ್ಯವಸ್ಥಿತ ರೀತಿಯಲ್ಲಿ ಸಾಗುತ್ತಿದೆ.ತನಿಖೆ ಪ್ರಗತಿಯಲ್ಲಿ ಇರುವ ವೇಳೆಯಲ್ಲಿ ಸಿಬಿಐ ಕಡೆಯಿಂದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಮಾಹಿತಿಗಳನ್ನು ಬಿಟ್ಟುಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ.ಸಿಬಿಐ ತನಿಖೆಯ ಹಾದಿ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಯಾವುದೇ ವರದಿಯು ಕೇವಲ ಊಹಾತ್ಮಕ ಮತ್ತು ವಾಸ್ತವಕ್ಕೆ ದೂರವಾಗಿರುವುದು ಎಂದು ಸಿಬಿಐ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

 

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.