ವಾಣಿಜ್ಯ ಜಾಹಿರಾತು
ಪೂರ್ವ ಲಡಾಖ್ ನಲ್ಲಿ ಭಾರತ-ಚೀನಾ ಶಾಂತಿ ಮಾತುಕತೆ ಬಳಿಕ ಸೇನಾ ಜಮಾವಣೆಯನ್ನು ಹಿಂಪಡೆಯಲು ಆರಂಭಿಸಿದ್ದರೂ ಸೋಮವಾರ ರಾತ್ರಿ ಗಡಿಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಘರ್ಜನೆ ಮೊಳಗಿಸಿವೆ. ಚೀನಾ ಸೇನೆಯ ಮೇಲೆ ಕಣ್ಣಿಡಲು ಹಾಗೂ ತರಬೇತಿ ದೃಷ್ಟಿಯಿಂದ ಭಾರತೀಯ ವಾಯುಪಡೆ ಗಸ್ತು ನಡೆಸಿದೆ. ಈ ಮೂಲಕ ಯಾವುದೇ ಸಂದರ್ಭದಲ್ಲೂ ಕಾರ್ಯಾಚರಣೆಯನ್ನು ನಡೆಸುವ ಸಾಮರ್ಥ್ಯವನ್ನು ಐಎಎಫ್ ಪ್ರದರ್ಶಿಸಿದೆ. ಪೂರ್ವ ಲಡಾಖ್ ನ ಮುಂಚೂಣಿ ನೆಲೆಗಳ ವಾಯುಪ್ರದೇಶದಲ್ಲು ಮಿಗ್-೨೯ಯುದ್ಧ ವಿಮಾನಗಳು ಹಾಗೂ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿವೆ.
ವಾಣಿಜ್ಯ ಜಾಹಿರಾತು