ಉತ್ತರಪ್ರದೇಶ: ಗೋಲ್‌ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಸ್ಪಲ್ಪ ಹುಳಿ…ಸ್ಪಲ್ಪ ಖಾರ..ಸ್ಪಲ್ಪ ಸಿಹಿಯಾಗಿರೋ ಟೇಸ್ಟ್‌ಗೆ ಬೇರ್ಯಾವುದೂ ಸಾಟಿಯಾಗಲಾರದು. ಇವಿಷ್ಟೇ ಅಲ್ದೆ ಗೋಲ್‌ಗಪ್ಪಾದಲ್ಲಿ ಮಿಂಟ್, ಜೀರಾ, ಮಿರ್ಚಿ ಅಂತ ಕೆಲವೊಂದು ಸ್ಟಾಲ್‌ಗಳಲ್ಲಿ ಇನ್ನಷ್ಟು ವೆರೈಟಿಯಾಗಿ ಕೊಡ್ತಾರೆ. ಆದರೆ, ಜೈಪುರದಲ್ಲೊಬ್ಬ ಗೋಲ್‌ಗಪ್ಪಾ ವ್ಯಾಪಾರಿ, ಸಿಹಿ-ಹುಳಿ-ಖಾರ ಬಿಟ್ಟು ಮಿರಿಂಡಾ ಗೋಲ್‌ಗಪ್ಪಾವನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ಪೂರಿಗೆ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಈರುಳ್ಳಿಯ ಸ್ಟಫಿಂಗ್‌ನ್ನು ಸೇರಿಸಿ ಸಿಹಿ-ಹುಳಿ ಪಾನಿಗಳಿಗೆ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಆದರೆ ಇಲ್ಲಿ ಫುಲ್ ಸ್ಟಫಿಂಗ್ ಪೂರಿಯನ್ನು ಮಿರಿಂಡಾದಲ್ಲಿ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಫುಡ್ ಬ್ಲಾಗರ್’ವೊಬ್ಬರು ಉತ್ತರಪ್ರದೇಶದ ಅಹಮದಾಬಾದ್’ನಲ್ಲಿ ಟೇಸ್ಟ್ ಮಾಡಿರೋ ಮಿರಿಂಡಾ ಗೋಲ್ ಗಪ್ಪಾದ ಬಗ್ಗೆ ಇಂಟರ್ ನೆಟ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂಟರ್‌ನೆಟ್‌ನಲ್ಲಿ ವೈರಲ್ ಆದ ವೀಡಿಯೋದಲ್ಲಿ ವ್ಯಾಪಾರಿ ಈ ಡಿಫರೆಂಟ್ ಮಿರಿಂಡಾ ಗೋಲ್‌ಗಪ್ಪಾಗಳನ್ನು ತಯಾರಿಸುವುದನ್ನು ನೋಡಬಹುದು. ಮಿರಿಂಡಾ ಬಾಟಲಿಯನ್ನು ಫುಲ್ ಅಲುಗಾಡಿಸಿ ನಂತರ ಅದನ್ನು ದೊಡ್ಡ ಪಾತ್ರೆಗೆ ಸುರಿಯುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಪೂರಿಗೆ ಆಲೂ ಸ್ಟಪಿಂಗ್‌ನ್ನು ಸೇರಿಸುತ್ತಾರೆ. ಬಳಿಕ ಮಿರಿಂಡಾದಲ್ಲಿ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡುತ್ತಾರೆ.
ಸದ್ಯ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಗ್ತಿದೆ. ಈ ವೀಡಿಯೋಗೆ 3 ಮಿಲಿಯನ್ ವೀಕ್ಷಣೆಗಳು, 127ಕ್ಕೂ ಹೆಚ್ಚು ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ.
ಕೆಲವೊಬ್ಬರು ಈ ಮಿರಿಂಡಾ ಗೋಲ್‌ಗಪ್ಪಾಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದೆಂಥಾ ಕಾಂಬಿನೇಶನ್, ನಾನ್‌ಸೆನ್ಸ್ ಎಂದು ಬೈದಿದ್ದಾರೆ. ಜನರು ತಿನ್ನುವ ಫುಡ್‌ನಲ್ಲೂ ಎಕ್ಸ್‌ಪರಿಮೆಂಟ್ ಮಾಡಿಕೊಂಡು ಜೋಕ್ ಮಾಡಲು ಆರಂಭಿಸಿದ್ದಾರೆ, ಈ ವೀಡಿಯೋ ನೋಡಿ ನನ್ನ ಮೂಡೇ ಹಾಳಾಯಿತು ಎಂದೆಲ್ಲಾ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಗೋಲ್‌ಗಪ್ಪೆ ಕಿ ತೋ ಇಜ್ಜತ್ ರಖೋ(ಗೋಲ್‌ಗಪ್ಪಾದ ಗೌರವವನ್ನಾದರೂ ಉಳಿಸಿಕೊಳ್ಳಿ’ ಎಂದು ಗೋಗರೆದಿದ್ದಾರೆ.
ವೀಡಿಯೋದಲ್ಲಿ ಗ್ರಾಹಕರೊಬ್ಬರು ಮಾತ್ರ ಮಿರಿಂಡಾ ಗೋಲ್‌ಗಪ್ಪಾವನ್ನು ಬಾಯಿ ಚಪ್ಪರಿಸಿಕೊಂಡು ತಿಂದು ಸೂಪರ್ ಎಂದು ಹೇಳುವುದನ್ನು ನೋಡಬಹುದು.