ನವದೆಹಲಿ: ಮಹಿಳಾ ಕ್ರಿಕಟ್ನ ಪ್ರತಿಭೆ ಮತ್ತು ಸಾವಿರಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿರುವ ಮಿಥಾಲಿ ರಾಜ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಭಾರತ ಮಹಿಳಾ ಕ್ರಿಕೆಟ್ ತಂಡದ ಪರವಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ 39 ವರ್ಷದ ಮಿಥಾಲಿ ರಾಜ್ ಇಂದು ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ನಾನು ಕ್ರಿಕೆಟ್ ವೃತ್ತಿಜೀವನದಿಂದ ನಿವೃತ್ತಿಯಾಗಲು ಇದು ಸರಿಯಾದ ಸಮಯವೆಂದು ನನಗನಿಸುತ್ತಿದೆ. ನಮ್ಮ ತಂಡವು ಉತ್ತಮ ಪ್ರತಿಭಾನ್ವಿತ ಆಟಗಾರ್ತಿರನ್ನೊಳಗೊಂಡಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ ಎಂದು ಮಿಥಾಲಿ ರಾಜ್ ಬರೆದುಕೊಂಡಿದ್ದಾರೆ.
ಕ್ರಿಕೆಟ್ ವಿದಾಯದ ಕುರಿತ ಟ್ವೀಟ್ ಮೂಲಕ ತಿಳಿಸಿರುವ ಮಿಥಾಲಿ ರಾಜ್, ಕಳೆದ ಹಲವು ವರ್ಷಗಳಿಂದ ನನಗೆ ಪ್ರೀತಿ ಹಾಗೂ ಬೆಂಬಲ ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಹಾಗೂ ಬೆಂಬಲದೊಂದಿಗೆ ನಾನು ಎರಡನೇ ಇನಿಂಗ್ಸ್ನತ್ತ ಮುಖ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
Thank you for all your love & support over the years!
I look forward to my 2nd innings with your blessing and support. pic.twitter.com/OkPUICcU4u— Mithali Raj (@M_Raj03) June 8, 2022
1999ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮಿಥಾಲಿ ರಾಜ್ ಭಾರತ ಮಹಿಳಾ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ಎರಡು ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಫೈನಲ್ ತಲುಪಿಸಿದ್ದ ಕೀರ್ತಿ ಮಿಥಾಲಿ ರಾಜ್ ಅವರದ್ದು.