ವಾಣಿಜ್ಯ ಜಾಹಿರಾತು

ಮುಖದ ಕಾಂತಿ ಹೆಚ್ಚಿಸಲು ತಮಗೆ ಸರಿಹೊಂದುವ ಕ್ರೀಂಗಳನ್ನು ಬಳಸುತ್ತಾರೆ. ಜೊತೆಗೆ ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ ಎಲ್ಲರ ಚರ್ಮಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳು ಸರಿಹೊಂದುವುದಿಲ್ಲ. ಆದರೂ ಪ್ರಯತ್ನ ಬಿಡಬೇಡಿ, ಚರ್ಮಕ್ಕೆ ಸರಿಹೊಂದುವ ಉತ್ಪನ್ನಗಳನ್ನು ಬಳಸಿ. ಆಗ ತ್ವಚೆ ಹೊಳಪು ಪಡೆದುಕೊಂಡು ಮತ್ತಷ್ಟು ಆತ್ಮಸ್ಥೈರ್ಯ ಬರುತ್ತದೆ.

ಅದಕ್ಕೆ ಈ ಬಾರಿ ನಿಮಗೆ ಸಮಯ, ಶ್ರಮ, ಹಣವನ್ನು ಉಳಿಸಬಲ್ಲ ಮೊಸರಿನ ಫೇಸ್ ಪ್ಯಾಕ್ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಇದನ್ನು ಬಳಸಿದ ನಂತರ ನಿಮಗೆ ಅದ್ಭುತವಾದ ಫಲಿತಾಂಶ ಸಿಗುವುದು ಗ್ಯಾರಂಟಿ.

ಎಣ್ಣೆ ಹಾಗೂ ಸಾಮಾನ್ಯ ತ್ವಚೆಯವರಿಗೆ


ಎಣ್ಣೆ ಹಾಗೂ ಸಾಮಾನ್ಯ ತ್ವಚೆಯವರಿಗೆ ಈ ಫೇಸ್ ಪ್ಯಾಕ್ ಸೂಕ್ತವಾಗಿದೆ. ಒಂದು ಚಮಚ ಕಡಲೆ ಹಿಟ್ಟನ್ನು 2 ಚಮಚ ಮೊಸರಿನೊಂದಿಗೆ ಬೆರೆಸಿ. ಪೇಸ್ಟ್ ಮೃದುವಾದ ಮೇಲೆ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಈ ಪ್ಯಾಕ್ ಚರ್ಮವನ್ನು ಶುದ್ಧೀಕರಿಸಿ, ಹೊಳಪು ನೀಡುತ್ತದೆ.

ಎಲ್ಲಾ ರೀತಿಯ ಚರ್ಮದವರಿಗಾಗಿ

ಅರ್ಧ ಟೀ ಚಮಚ ಅರಿಶಿನದೊಂದಿಗೆ ಮೊಸರು ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ತೊಳೆಯುವ ಮೊದಲು ಸುಮಾರು 15 ನಿಮಿಷಗಳ ಕಾಲ ಬಿಡಿ. ಅರಿಶಿನ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಈ ಫೇಸ್ ಪ್ಯಾಕ್ ನಿಮ್ಮ ಮುಖವನ್ನು ಆರೋಗ್ಯದಿಂದ ಹೊಳೆಯುವಂತೆ ಮಾಡುತ್ತದೆ.

ಸಾಮಾನ್ಯ ಹಾಗೂ ಒಣ ತ್ವಚೆಯವರಿಗೆ

2 ಚಮಚ ಮೊಸರನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಚರ್ಮದ ಕಾಂತಿಗೆ


ಈ ಫೇಸ್ ಪ್ಯಾಕ್ ಚರ್ಮ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಎಣ್ಣೆ ತ್ವಚೆಯವರು ಇದನ್ನು ಪ್ರಯತ್ನಿಸಬಹುದು. ನಿಂಬೆ ರಸ ಮತ್ತು ಮೊಸರನ್ನು ಬೆರೆಸಿ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ತೊಳೆಯುವ ಮೊದಲು ಒಣಗಲು ಬಿಡಿ. ನಿಮ್ಮ ಚರ್ಮದ ಗುಣಮಟ್ಟ ಸುಧಾರಿಸಲು ಈ ನೈಸರ್ಗಿಕ ಪ್ಯಾಕ್ ಬಳಸಬಹುದು.

ಸೂಕ್ಷ್ಮ ಚರ್ಮದವರಿಗೆ

ಮೊಸರು ಮತ್ತು ಓಟ್ಸ್‌ನ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಓಟ್ಸ್ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಮೊಸರಿನ ಜೊತೆ ಬೆರೆಸಿದಾಗ ಇದು ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕಂದುಬಣ್ಣ ಕಡಿಮೆ ಮಾಡಲು


ಮೊಸರು ಮತ್ತು ಹಸಿ ಆಲೂಗೆಡ್ಡೆ ತಿರುಳನ್ನು ಸೇರಿಸಿ ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ನಂತರ ತೊಳೆಯಿರಿ. ಈ ಮೊಸರು ಮತ್ತು ಆಲೂಗೆಡ್ಡೆ ಫೇಸ್ ಪ್ಯಾಕ್ ನಿಮ್ಮ ಚರ್ಮದ ಕಂದು ಬಣ್ಣ ಕಡಿಮೆ ಮಾಡಿ, ಪುನಃ ನೈಸರ್ಗಿಕ ಮೈಬಣ್ಣ ಬರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಚರ್ಮ ಸ್ವಚ್ಛಗೊಳಿಸಲು

ಸೌತೆಕಾಯಿ ರಸದೊಂದಿಗೆ ಮೊಸರನ್ನು ಸೇರಿಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಒಣಗಲು ಬಿಡಿ, ನಂತರ ತೊಳೆಯಿರಿ. ಇದು ಸಹ ಕಂದು ಬಣ್ಣವನ್ನು ತೆಗೆದುಹಾಕಲು, ಚರ್ಮ ಸ್ವಚ್ಛ ಗೊಳಿಸಲು ಸಹಾಯ ಮಾಡುತ್ತದೆ.

ಎಣ್ಣೆಯುಕ್ತ ಚರ್ಮದವರಿಗೆ
ಎಣ್ಣೆಯುಕ್ತ ಚರ್ಮ ಅಥವಾ ಪ್ರಬುದ್ಧ ಚರ್ಮ ಹೊಂದಿದ್ದರೆ, ಈ ಫೇಸ್ ಪ್ಯಾಕ್ ನಿಮಗೆ ಸೂಕ್ತವಾಗಿದೆ. ಮೊಸರು ಮತ್ತು ಒಣಗಿದ ಕಿತ್ತಳೆ ಸಿಪ್ಪೆ ಪುಡಿಯನ್ನು ಬೆರೆಸಿ ನಿಮ್ಮ ಚರ್ಮದ ಮೇಲೆ ಮಸಾಜ್ ಮಾಡಿ. ಒಣಗಲು ಬಿಟ್ಟು, ನಂತರ ತೊಳೆಯಿರಿ.

ಚರ್ಮ ಕಾಂತಿಯುತವಾಗಿ ಹೊಳೆಯಲು

ಮೊಸರು ಮತ್ತು ಮುಲ್ತಾನಿ ಮಿಟ್ಟಿಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಇದು ನೀವು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.