ಬೇಕಾಗುವ ಪದಾರ್ಥಗಳು:
ಈರುಳ್ಳಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಹಸಿಮೆಣಸಿನಕಾಯಿ – 2
ಕತ್ತರಿಸಿದ ಟೊಮ್ಯಾಟೋ – 2
ಉಪ್ಪು – ಅರ್ಧ ಚಮಚ
ಅರಿಶಿನ – ಕಾಲು ಚಮಚ
ಕೆಂಪುಮೆಣಸಿನಪುಡಿ – ಅರ್ಧ ಚಮಚ
ಧನಿಯಾ ಪುಡಿ – ಅರ್ಧ ಚಮಚ
ಅಣಬೆ – 200 ಗ್ರಾಂ
ಎಣ್ಣೆ – 3 ಚಮಚ
ಚಕ್ಕೆ – 1 ಕಡ್ಡಿ
ಲವಂಗ – 3
ಪಲಾವ್ ಎಲೆ – 1
ಜೀರಿಗೆ – ಅರ್ಧ ಚಮಚ
ಕರಿಬೇವಿನ ಎಲೆ – 1 ಕಡ್ಡಿ
ತುರಿದ ತೆಂಗಿನಕಾಯಿ-ಅರ್ಧ ಕಪ್
ಗೋಡಂಬಿ- 10
ಗಸಗಸೆ- 2 ಚಮಚ
ಮಾಡುವ ವಿಧಾನ:
ಹಂತ : 1
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಇದಕ್ಕೆ ತೆಳುವಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಕತ್ತರಿಸಿದ ಟೊಮ್ಯಾಟೋ, ಉಪ್ಪು ಮತ್ತು ಅರಿಶಿನ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಕೆಂಪುಮೆಣಸಿನ ಪುಡಿ, ಧನಿಯಾ ಪುಡಿ, ಕತ್ತರಿಸಿದ ಅಣಬೆ ಸೇರಿಸಿ ಹುರಿದು ಮುಚ್ಚಳ ಮುಚ್ಚಿ ಬೇಯಿಸಿ.
ಹಂತ : 2
ತುರಿದ ತೆಂಗಿನಕಾಯಿ, ಗೋಡಂಬಿ, ಗಸಗಸೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಮಸಾಲೆ ತಯಾರಿಸಿಕೊಳ್ಳಿ. ಮಿಶ್ರಣವನ್ನು ಹುರಿಯುತ್ತಿರುವ ಅಣಬೆಗೆ ಸೇರಿಸಿ, ಕೈಯಾಡಿಸಿ. ಇದಕ್ಕೆ ಉಪ್ಪು ಸೇರಿಸಿ ಕುದಿಸಿ. ಗ್ರೇವಿಯ ಹದಕ್ಕೆ ಬರುವಂತೆ ನೀರು ಸೇರಿಸಿ, ಮುಚ್ಚಳ ಮುಚ್ಚಿ ಬೇಯಿಸಿ. ಈಗ ಕೊತ್ತಂಬರಿ ಸೊಪ್ಪು ಸೇರಿಸಿದರೆ ಮಶ್ರೂಮ್ ಕೂರ್ಮಾ ಸವಿಯಲು ಸಿದ್ಧ.