ವಾಣಿಜ್ಯ ಜಾಹಿರಾತು

ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕೆಂದು ಕಳುಹಿಸಿದ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಉಡಾವಣೆ ಮಾಡಿದ ಬಾಹ್ಯಾಕಾಶ ನೌಕೆಯು ಅಸಾಧ್ಯವೆಂದು ಭಾವಿಸಿದ್ದ ಸಾಧನೆಯನ್ನು ಮಾಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಕೊರೊನಾವನ್ನು ಮುಟ್ಟಿದೆ.

ಇದು ಸುಮಾರು 2 ಮಿಲಿಯನ್ ಡಿಗ್ರಿ ಫ್ಯಾರನ್‌ಹೀಟ್‌ನ ವಿಪರೀತ ಪರಿಸರವಾಗಿದ್ದು ಅದನ್ನು ನೌಕೆ ಸ್ಪರ್ಶಿಸಿರುವುದು ವಿಜ್ಞಾನ ಜಗತ್ತಿನ ಮೈಲುಗಲ್ಲು ಎಂದು ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೆ, ಗಗನಯಾನ ಸಂಸ್ಥೆಯ ಪ್ರಮುಖ ಹೆಜ್ಜೆ ಮತ್ತು ಮನುಕುಲ ಮತ್ತು ಸೌರ ವಿಜ್ಞಾನಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಎಂದು ಕರೆಯಲ್ಪಡುವ ರಾಕೆಟ್‌ಶಿಪ್, ಎಪ್ರಿಲ್ 28ರಂದು ಸೂರ್ಯನ ಮೇಲಿನ ವಾತಾವರಣದ ಕೊರೊನಾವನ್ನು ಯಶಸ್ವಿಯಾಗಿ ಪ್ರವೇಶಿಸಿ ಕೆಂಪು-ಬಿಸಿ ನಕ್ಷತ್ರದ ಮೇಲ್ಮೈಯಲ್ಲಿರುವ ಕಣಗಳು ಮತ್ತು ಕಾಂತೀಯ ಕ್ಷೇತ್ರಗಳಿಂದ ಮಾದರಿ ಸಂಗ್ರಹಿಸಿತು.

ಸೋಲಾರ್ ಪ್ರೋಬ್ ಕಪ್ ಅನ್ನು ನಿರ್ಮಿಸಿದ ಮತ್ತು ಮೇಲ್ವಿಚಾರಣೆ ಮಾಡಿದ ಹಾರ್ವರ್ಡ್ ಮತ್ತು ಸ್ಮಿತ್ಸೋನಿಯನ್ನಲ್ಲಿರುವ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್ (ಅಜಿಂ)ಸದಸ್ಯರು ಸೇರಿದಂತೆ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ದೊಡ್ಡ ಸಹಯೋಗದಿಂದಾಗಿ ಈ ಐತಿಹಾಸಿಕ ಕ್ಷಣವನ್ನು ಸಾಧಿಸಲು ಸಾಧ್ಯವಾಗಿದೆ.

ಸೋಲಾರ್ ಪ್ರೋಬ್ ಕಪ್ ಸೂರ್ಯನ ವಾತಾವರಣದಿಂದ ಕಣಗಳನ್ನು ಸಂಗ್ರಹಿಸುವ ಸಾಧನವಾಗಿದ್ದು, ಬಾಹ್ಯಾಕಾಶ ನೌಕೆಯು ಕೊರೊನಾವನ್ನು ನಿಜವಾಗಿಯೂ ದಾಟಿದೆ ಎಂದು ಪರಿಶೀಲಿಸಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.