ಇತ್ತೀಚೆಗೆ ಬಿಡುಗಡೆಯಾದ ‘ಪುಷ್ಪ’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಲೇ ಇದ್ದು ಸಿನಿಮಾರಂಗದಲ್ಲಿ ಸಖತ್ ಬಿಝಿಯಾಗಿದ್ದಾರೆ. ಟಾಲಿವುಡ್ ನಲ್ಲಂತೂ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದಾರೆ. ಇದೀಗ ಅವರ ಸಿನಿಮಾಪಟ್ಟಿಗೆ ಮತ್ತೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಈ ಬಾರಿ ರಶ್ಮಿಕಾ ಮಂದಣ್ಣ ಟಾಲಿವುಡ್ನ ಸೂಪರ್ ಸ್ಟಾರ್ ಜ್ಯೂ. ಎನ್.ಟಿ.ಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.
ಜ್ಯೂ.ಎನ್.ಟಿ.ಆರ್-ಕೊರಟಾಲ ಶಿವ ಕಾಂಬಿನೇಷನ್ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ರಶ್ಮಿಕಾ ಮಂದಣ್ಣ ನಾಯಕಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ವರ್ಷವೇ ಜ್ಯೂ.ಎನ್.ಟಿ.ಆರ್ – ರಶ್ಮಿಕಾ ಜೋಡಿಯಲ್ಲಿ ಸಿನಿಮಾ ಸೆಟ್ಟೇರುವ ಬಗ್ಗೆ ಸುದ್ದಿಯಾಗಿತ್ತು. ಆ ಬಳಿಕ ನಾಯಕಿಯ ಸ್ಥಾನದಲ್ಲಿ ಬಾಲಿವುಡ್ನ ಹೆಸರಾಂತ ನಟಿಮಣಿಯರಾದ ಆಲಿಯಾ ಭಟ್, ಜಾನ್ವಿ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಅವರ ಹೆಸರೂ ಕೇಳಿಬಂದಿತ್ತು. ಆದರೆ ಮತ್ತೆ ಜೂ. ಎನ್ ಟಿ ಆರ್ ಜೊತೆಗೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಆದರೆ, ಈವರೆಗೆ ರಶ್ಮಿಕಾ ಆಗಲೀ ಅಥವಾ ಚಿತ್ರ ತಂಡ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಚಿತ್ರತಂಡ ಮಾತ್ರ ರಶ್ಮಿಕಾ ಮಂದಣ್ಣ ಅವರನ್ನೇ ನಾಯಕಿಯಾಗಿ ಆರಿಸಿಕೊಂಡಿದೆ ಎಂದು ಹೇಳಲಾಗಿದೆ.
‘ಪುಷ್ಪ’ ಸಿನಿಮಾದ ಯಶಸ್ಸಿನ ಬಳಿಕ ಪುಷ್ಪ ಸಿನಿಮಾದ ಎರಡನೇ ಪಾರ್ಟ್ ನಲ್ಲಿ ನಟಿಸಲು ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ ರಶ್ಮಿಕಾ. ‘ಪುಷ್ಪ’ ಸಿನಿಮಾದ ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆಯನ್ನು ರಶ್ಮಿಕಾ ಮಂದಣ್ಣ ಪಡೆದಿದ್ದರಂತೆ, ಆದರೆ ಎರಡನೇ ಭಾಗಕ್ಕೆ 3 ಕೋಟಿ ಸಂಭಾವನೆಗೆ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡಿದ್ದಾರಂತೆ. ಸ್ಟಾರ್ ಪಟ್ಟಿಯಲ್ಲಿ ಮಿಂಚುತ್ತಿರುವ ಕರ್ನಾಟಕದ ಕುವರಿಗೆ ಈ ಚಿತ್ರ ಮತ್ತೊಂದು ಹಿಟ್ ನೀಡುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಈ ಸುದ್ದಿಯಿಂದ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಅಂತೂ ಫುಲ್ ಖುಷಿಯಾಗಿದ್ದಾರೆ.