ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ಎಲ್ಲರೂ ನೈಸರ್ಗಿಕ ಪಾನೀಯವಾದ ಎಳನೀರಿನ ಮೊರೆಹೋಗುತ್ತಾರೆ. ಎಳನೀರು ದೇಹಕ್ಕೆ ತಂಪು ನೀಡುತ್ತದೆ. ಸಾಮಾನ್ಯವಾಗಿ ಜ್ವರ, ಸುಸ್ತು ಕಂಡುಬಂದಾಗ ಮತ್ತು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಎಳನೀರನ್ನು ಅವಲಂಬಿಸುತ್ತಾರೆ. ಹಲವರಿಗೆ ಎಳನೀರನ್ನು ದಿನದ ಯಾವ ಹೊತ್ತಿನಲ್ಲಿ ಕುಡಿಯಬೇಕು ಎಂಬ ಗೊಂದಲವಿರುತ್ತದೆ. ಎಳನೀರನ್ನು ದಿನದ ಯಾವ ಹೊತ್ತಿನಲ್ಲಾದರೂ ಕುಡಿಯಬಹುದು. ಈ ಎಳನೀರು ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ.
ಎಳನೀರಿನಲ್ಲಿದೆ ಸಾಕಷ್ಟು ಪ್ರಯೋಜನಗಳು
ನಿರ್ಜಲೀಕರಣವನ್ನು ಕಡಿಮೆಗೊಳಿಸುತ್ತದೆ
ಎಳನೀರು ದೇಹಕ್ಕೆ ಬೇಕಾಗಿರುವ ಅಂಶಗಳನ್ನು ಹೊಂದಿರುವುದರಿAದ ನಿರ್ಜಲೀಕರಣದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
ಜೀರ್ಣಕ್ರಿಯೆ
ಎಳನೀರನ್ನು ಕುಡಿಯುವುದರಿಂದ ಜೀವಕೋಶಕ್ಕೆ ಅನೇಕ ಪೋಷಕಾಂಶಗಳ ಪೂರೈಕೆಯಾಗುತ್ತದೆ. ಮತ್ತು ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಕಾರ್ಯನಿರ್ವಹಿಸುತ್ತದೆ.
ಮಧುಮೇಹ
ಎಳನೀರಿನಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ದೇಹದ ರಕ್ತದಲ್ಲಿರುವ ಎಲೆಕ್ಟ್ರೋಲೈಟ್ ಕಣಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.
ಮೂಳೆಗೆ ಶಕ್ತಿ
ಎಳನೀರಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಮೂಳೆಗಳನ್ನು ಗಟ್ಟಿ ಮತ್ತು ಸಧೃಡಗೊಳಿಸುವಲ್ಲಿ ಸಹಾಯವನ್ನು ಮಾಡುತ್ತದೆ.
ಹೊಟ್ಟೆ ಉಬ್ಬರ
ಎಳನೀರನ್ನು ಕ್ರಮವಾಗಿ ಕುಡಿಯುವುದರಿಂದ ಹೊಟ್ಟೆ ಉರಿ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.
ತ್ವಚೆಗೆ ಕಾಂತಿ
ಎಳನೀರನ್ನು ಕುಡಿಯುವುದರಿಂದ ನಮ್ಮ ತ್ವಚೆಗೆ ಬೇಕಾದ ತೇವಾಂಶವನ್ನು ನೀಡುತ್ತದೆ. ಸುಕ್ಕುಗಟ್ಟಿದ ತ್ವಚೆಯನ್ನು ಕಡಿಮೆಗೊಳಿಸಿ, ಉತ್ತಮ ತ್ವಚೆಯನ್ನು ಹೊಂದುವಲ್ಲಿ ಸಹಾಯ ಮಾಡುತ್ತದೆ.
ತೂಕ ಇಳಿಸುವುದು
ಎಳನೀರು ದೇಹದಲ್ಲಿನ ಅನಗತ್ಯ ಕೊಬ್ಬಿನ ಅಂಶವನ್ನು ತೆಗೆದು, ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.
ಕೂದಲ ಉದುರುವಿಕೆಯ ಸಮಸ್ಯೆ
ಎಳನೀರನ್ನು ಕುಡಿಯುವುದರಿಂದ ನಮ್ಮ ಕೂದಲು ಸಮೃದ್ಧವಾಗಿ ಬೆಳೆದು, ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
ರಕ್ತದೊತ್ತಡ ಸಮಸ್ಯೆ
ಎಳನೀರನ್ನು ಕಡಿಯುವುದರಿಂದ ಹೃದಯಾಘಾತಗಳಂತಹ ಅಪಾಯಕಾರಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಜೊತೆಗೆ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.
ಮೂತ್ರದ ಸಮಸ್ಯೆ
ಎಳನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಉರಿಮೂತ್ರದಂತಹ ಅಪಾಯಕಾರಿ ಅಂಶವನ್ನು ದೂರಮಾಡುತ್ತದೆ.