ಮಂಗಳೂರು: ತುಳುನಾಡಿನ ಭಾಗದ ಜನರ ಆರಾಧ್ಯ ದೈವ ಗುಳಿಗ. ಸಾಮಾನ್ಯವಾಗಿ ಗುಳಿಗ ದೈವರಕ್ಕೆ ಒಂದೇ ಸಮಯದಲ್ಲಿ ಎರಡೆರಡು ದೈವಗಳು ನರ್ತನ ಸೇವೆ ಮಾಡಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಇದೇ ಮೊದಲ ಭಾರಿಗೆ 9 ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಬರ್ಕಾಜೆ ಎಂಬ ಗ್ರಾಮದಲ್ಲಿ ನವದುರ್ಗೆಯರ ದೇವಸ್ಥಾನವಿದೆ. ಈ ನವದುರ್ಗೆಯರ ದೇವಸ್ಥಾನದಲ್ಲಿ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ದುರ್ಗಾಪರಮೇಶ್ವರಿ ಕ್ಷೇತ್ರಪಾಲಕರಾಗಿ 9 ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.
ಕಳೆದ ಕೆಲ ವರ್ಷಗಳ ಹಿಂದೆ ಬರ್ಕಾಜೆ ಗ್ರಾಮದಲ್ಲಿ ಪುನರ್ ನಿರ್ಮಾಣವಾದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ. ಹೀಗಾಗಿ ಆ 9 ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತದೆ.
ಏಕಕಾಲದಲ್ಲಿ ನವಗುಳಿಗಗಳ ನರ್ತನ ಸೇವೆಯೂ ತುಳುನಾಡಿನ ಇತಿಹಾಸದಲ್ಲೇ ಮೊದಲನೆಯದ್ದಾಗಿದೆ. ಈ ನವ ನರ್ತನವನ್ನು ವೀಕ್ಷಿಸಲು ದೂರದ ಊರುಗಳಿಂದ ಸಾಕಷ್ಟು ಜನ ಆಗಮಿಸಿದ ಗುಳಿಗಗಳ ನರ್ತನ ಸೇವೆಯನ್ನು ಕಣ್ಮುಂಬಿಕೊಮಡಿದ್ದಾರೆ.
ನವದುರ್ಗೆಯರ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ನೆರವೇರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಕರ್ನಾಟಕ ಹೊರತುಪಡಿಸಿ ಇತರ ಸ್ಥಳಗಳಿಂದಲೂ ಜನರು ಇಲ್ಲಿಗೆ ಬಂದು ದೇವರ ಸೇವೆಯನ್ನು ಮಾಡುತ್ತಾರೆ.