ವಾಣಿಜ್ಯ ಜಾಹಿರಾತು

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಮನೆ ಮೇಲೆ ಮತ್ತು ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್‍ಸಿಬಿ ದಾಳಿ ನಡೆಸಿದೆ. ಮುಂಬೈ ಕ್ರೂಸ್ ಡ್ರಗ್ಸ್ ಬಸ್ಟ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಿಂದ ಮಾಹಿತಿ ಪಡೆದು ಎನ್‌ಸಿಬಿ ತಂಡಗಳು ಈ ರೈಡ್ ನಡೆಸಿದೆ ಎನ್ನಲಾಗಿದೆ.

ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್​ ಖಾನ್ ನಿವಾಸ ‘ಮನ್ನತ್’ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಸಿಬಿ ಅಧಿಕಾರಿಗಳು ತನಿಖೆಗಾಗಿ ಶೋಧ ನಡೆಸಲು ಶಾರುಖ್ ನಿವಾಸಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಎನ್​ಸಿಬಿಯ ಮತ್ತೊಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಇದೇ ವೇಳೆ ಎನ್​ಸಿಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ.

ನಟಿ ಅನನ್ಯಾ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸ್ನೇಹಿತೆಯಾಗಿದ್ದು, ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ ಆರ್ಯನ್ ಖಾನ್ ಮೊಬೈಲ್ ನಲ್ಲಿ ಸಿಕ್ಕಿದೆ, ಇದಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ವಿಚಾರಣೆಗೆ ಕರೆದಿದೆ ಎಂದು ಹೇಳಲಾಗುತ್ತಿದೆ. ಅನನ್ಯಾ ಪಾಂಡೆ, ಬಾಲಿವುಡ್ ನಟ ಚಂಕಿ ಪಾಂಡೆಯವರ ಪುತ್ರಿ.

ಆರ್ಯನ್ ಖಾನ್ ಮತ್ತು ಇತರ 8 ಮಂದಿಯನ್ನು ಅಕ್ಟೋಬರ್ 3ರಂದು ಬಂಧಿಸಲಾಗಿತ್ತು. ಮುಂಬೈ ಕರಾವಳಿಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಬಂಧನವಾಗಿತ್ತು. ನಿನ್ನೆ ಮುಂಬೈ ವಿಶೇಷ ನ್ಯಾಯಾಲಯವು ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಇಂದು ಮುಂಜಾನೆ ನಟ ಶಾರುಖ್ ಆರ್ಥರ್ ರೋಡ್ ಜೈಲಿಗೆ ತೆರಳಿ ಆರ್ಯನ್​ರನ್ನು ಭೇಟಿಯಾಗಿದ್ದರು.  ಇದಾದ ಕೆಲವು ಸಮಯದ ನಂತರ ಎನ್​ಸಿಬಿ ಶೋಧಕ್ಕಾಗಿ ದಾಳಿ ನಡೆಸಿದೆ. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಹೈಕೋರ್ಟ್​ನಲ್ಲಿ ಅಕ್ಟೋಬರ್ 26ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.