ವಾಣಿಜ್ಯ ಜಾಹಿರಾತು
ಶಾಕುಂತಲಾ ದೇವಿ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರ. ಮಾನವ ಕಂಪ್ಯೂಟರ‍್ ಎಂದೇ ಖ್ಯಾತಿಗಳಿಸಿದ್ದ ಇವರು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದರು. ಆದರೆ ಇದೀಗ ಹೈದರಾಬಾದ್‌ನ 20 ವರ್ಷದ ಯುವಕ ನೀಲಕಂಠ ಭಾನು ಪ್ರಕಾಶ್, ಶಾಕುಂತಲಾ ದೇವಿಯ ದಾಖಲೆಯನ್ನು ಮುರಿದು ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್ ಆಗಿ ಹೊರಹೊಮ್ಮಿದ್ದಾರೆ.
2020ರಲ್ಲಿ ಲಂಡನ್‌ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್‌ನಲ್ಲಿ ನಡೆದ ಮೆಂಟಲ್ ಕೌಂಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಇವರು ತಂದು ಕೊಟ್ಟಿದ್ದಾರೆ.
ಇಂಗ್ಲೆಂಡ್, ಜರ್ಮನಿ, ಯುಎಇ, ಫ್ರಾನ್ಸ್, ಗ್ರೀಸ್ ಮತ್ತು ಲೆಬನಾನ್ ಸೇರಿ 13 ದೇಶಗಳಿಂದ 57 ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾನು ಪ್ರಕಾಶ್ ಚಿನ್ನದ ಪದಕ ಗೆದ್ದಿದ್ದಾರೆ. ಇವರು 4 ವಿಶ್ವದಾಖಲೆ ಹಾಗೂ 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದಾರೆ.
ವಾಣಿಜ್ಯ ಜಾಹಿರಾತು