ವಾಣಿಜ್ಯ ಜಾಹಿರಾತು

ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ತನ್ನ ಬಳಕೆದಾರರಿಗಾಗಿ ಕಾಲಕಾಲಕ್ಕೆ ಹೊಸ ಹೊಸ ಫೀಚರ್ ಗಳನ್ನು ಅಳವಡಿಸಿಕೊಳ್ಳುತ್ತಲೇ ಇದೆ. ಇದೀಗ ಗ್ರೂಪ್ ಅಡ್ಮಿನ್ ಗಳಿಗಾಗಿ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈ ಮೂಲಕ ಗ್ರೂಪ್ ಅಡ್ಮಿನ್ ಗಳು ತಮ್ಮ ಗ್ರೂಪ್ ನ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಲಿದ್ದಾರೆ.

ಆ ಹೊಸ ಆಯ್ಕೆ ಏನಂದರೆ, ಇನ್ಮೇಲೆ ಯಾರೇ ಸದಸ್ಯರು ಗ್ರೂಪ್ ಗೆ ಸಂದೇಶ ಕಳುಹಿಸಿದರೂ ಅವರ ಸಂದೇಶವನ್ನು ಗ್ರೂಪ್ ಅಡ್ಮಿನ್ ಅಳಿಸುವ ಆಯ್ಕೆ ಹೊಂದಲಿದ್ದಾರೆ.ಇದರಿಂದ ಗ್ರೂಪ್ ನ ಅಡ್ಮಿನ್ ಗಳು ತಮ್ಮ ಗ್ರೂಪಿಗೆ ಬರುವ ಸಂದೇಶಗಳ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಲು ಸಾಧ್ಯವಾಗಲಿದೆ. ಅನುಚಿತ ಸಂದೇಶಗಳನ್ನು ಯಾರಾದರೂ ಶೇರ್ ಮಾಡಿದ್ದಲ್ಲಿ ಅವರ ಅನುಮತಿ ಪಡೆಯದೇನೇ ಅದನ್ನು ತೆಗೆದುಹಾಕಲು ಅಡ್ಮಿನ್ ಗಳಿಗೆ ಸಾಧ್ಯವಾಗಲಿದೆ.

ಗುಂಪಿನ ನಿರ್ವಾಹಕರು(ಅಡ್ಮಿನ್) ಗ್ರೂಪ್ ಚಾಟ್‌ನಲ್ಲಿ ನಿರ್ದಿಷ್ಟ ಸಂದೇಶವನ್ನು ಅಳಿಸಿದಾಗ, ಗ್ರೂಪ್ ಅಡ್ಮಿನ್ ಇದನ್ನು ಅಳಿಸಿದ್ದಾರೆ ಎಂಬ ಸಂದೇಶ ಕಾಣಿಸಲಿದೆ.
ಮುಂದಿನ ಅಪ್ಡೇಟ್ ನಲ್ಲಿ ಈ ವೈಶಿಷ್ಟ್ಯ ಅಂಡ್ರಾಯ್ಡ್  ಬಳಕೆದಾರರಿಗೆ ಲಭ್ಯವಿರಲಿದೆ ಎಂದು ವಾಟ್ಸ್ ಆಪ್ ತಿಳಿಸಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.